ಮಿಯಾಮಿ:ಮಾಜಿ ಜೂನಿಯರ್ ಸ್ಕೀಯಿಂಗ್ ಚಾಂಪಿಯನ್ ಜಾನಿಕ್ ಸಿನ್ನರ್ ಮಿಯಾಮಿ ಓಪನ್‌ನಲ್ಲಿ ಫೈನಲ್ ತಲುಪಿದ್ದಾರೆ .
19 ವರ್ಷದ ವಯಸ್ಸಿನಲ್ಲಿ ಮಿಯಾಮಿ ಪುರುಷರ ಫೈನಲ್ ತಲುಪಿದ ನಾಲ್ಕನೇ ಆಟಗಾರರ ಎನ್ನುವ ಹಿರಿಮೆಗೆ ಇಟಾಲಿಯನ್ ಜಾನಿಕ್ ಸಿನ್ನರ್ ಪಾತ್ರರಾಗಿದ್ದಾರೆ. ಈ ಮೊದಲು ನೊವಾಕ್ ಜೊಕೊವಿಕ್, ರಾಫೆಲ್ ನಡಾಲ್ ಮತ್ತು ಆಂಡ್ರೆ ಅಗಾಸ್ಸಿ ತಮ್ಮ 19ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.