ನವದೆಹಲಿ:COVID-19 ಬಿಕ್ಕಟ್ಟಿನಿಂದಾಗಿ ಮ್ಯಾಡ್ರಿಡ್‌ನಲ್ಲಿ ನಡೆಯಬೇಕಿದ್ದ ಫೈನಲ್ಸ್ ಪಂದ್ಯ ಹಾಗೂ ಮತ್ತು ಫಿನ್‌ಲ್ಯಾಂಡ್ ವಿರುದ್ಧದ ಭಾರತ ಪಂದ್ಯ ಒಳಗೊಂಡಂತೆ ಎಲ್ಲಾ ಪಂದ್ಯಗಳನ್ನು ಮುಂದೂಡುವುದಾಗಿ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಪ್ರಕಟಿಸಿದೆ.
ಡೇವಿಸ್ ಕಪ್ ಮುಂದೂಡಿದ ಐಟಿಎಫ್ ಸೆರ್ಬಿಯಾ ಮತ್ತು ಕ್ರೊಯೇಷಿಯಾದ ಪ್ರದರ್ಶನ ಪಂದ್ಯಗಳಲ್ಲಿ ಭಾಗವಹಿಸಿದ ನಂತರ ವಿಶ್ವದ ನಾಲ್ಕು ಪ್ರಮುಖ ಟೆನಿಸ್ ಆಟಗಾರರು ಹಾಗೂ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ಸೇರಿದಂತೆ ಇನ್ನಿತರ ಕ್ರೀಡಾಪಟುಗಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಐಟಿಎಫ್ ಈ ನಿರ್ಧಾರಕ್ಕೆ ಬಂದಿದೆ.
ಮ್ಯಾಡ್ರಿಡ್‌ನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯಗಳು 2021 ಕ್ಕೆ ನಡೆಯಲಿದ್ದು, ಫೈನಲ್ಗೆ ಆಯ್ಕೆಯಾದ 18 ತಂಡಗಳು ಮರು ನಿಗದಿಪಡಿಸಿದ ದಿನಾಂಕದಂದು ಫೈನಲ್‌ನಲ್ಲಿ ಸ್ಪರ್ಧಿಸಲಿವೆ. ಎಲ್ಲರ ಆರೋಗ್ಯ ಮತ್ತು ಕಾಳಜಿಗಾಗಿ ಸತತ 3 ತಿಂಗಳ ಪರಿಶೀಲನೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಐಟಿಎಫ್ ಹೇಳಿದೆ. ಟೈ ಆಗಿದ್ದ ಮ್ಯಾಚ್ಗಳು ಕೂಡ ಮುಂದಿನ ವರ್ಷದ ಮಾರ್ಚ್ ಅಥವಾ ಸೆಪ್ಟೆಂಬರ್ ನಲ್ಲಿ ನಡೆಯಲಿವೆ.
ಇನ್ನು ಈ ಕೋವಿಡ್ ಎಟಿಪಿ ಮತ್ತು ಡಬ್ಲ್ಯೂಟಿಎ ಪ್ರವಾಸಗಳನ್ನು ನಿಲ್ಲಿಸಿದೆ. 2ನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ಹಳೆಯ ಗ್ರ್ಯಾಂಡ್ಸ್ಲ್ಯಾಮ್ ಈವೆಂಟ್ ಆದ ವಿಂಬಲ್ಡನ್ ಸಹ ರದ್ದುಗೊಂಡಿದೆ.
ಡೇವಿಸ್ ಕಪ್ ಕ್ವಾಲಿಫೈಯರ್‌ನಲ್ಲಿ ಭಾರತ ಕ್ರೊಯೇಷಿಯಾ ವಿರುದ್ಧ 1-3ರಿಂದ ಸೋಲನುಭವಿಸಿದರೆ, ಫಿನ್ಲ್ಯಾಂಡ್ ವಿಶ್ವ ಸಮೂಹ ಪ್ಲೇ-ಆಫ್‌ಗಳಲ್ಲಿ ಮೆಕ್ಸಿಕೊವನ್ನು 3-2 ಗೋಲುಗಳಿಂದ ಸೋಲಿಸಿತು. ಅಗ್ರ -100 ರಲ್ಲಿ ಫಿನ್ಲೆಂಡ್‌ನ ಸಿಂಗಲ್ಸ್ ಆಟಗಾರರಲ್ಲಿ ಯಾರೂ ಇಲ್ಲದ ಕಾರಣ ಇದು ಭಾರತಕ್ಕೆ ಸುಲಭವಾದ ಡ್ರಾ ಆಗಿದೆ. 101 ನೇ ಸ್ಥಾನದಲ್ಲಿರುವ ಎಮಿಲ್ ರುಸುವುರಿ ಅವರ ಅತ್ಯುತ್ತಮ ಆಟಗಾರರಾಗಿದ್ದರೆ, ಇತರರು ಅಗ್ರ - 400 ರ ಪಟ್ಟಿಯಲ್ಲಿರಲ್ಲಿಲ್ಲ.