ಕರ್ನಾಟಕ

karnataka

ETV Bharat / sports

ಇದು ನನ್ನ ಕೊನೆಯ ಅವಕಾಶವೇನಲ್ಲ: ಯುಎಸ್​ ಓಪನ್ ಫೈನಲ್​ನಲ್ಲಿ ಸೋತ ಜ್ವರೆವ್​ ಭಾವುಕ ನುಡಿ - ಯುಎಸ್​ ಓಪನ್​ ಫೈನಲ್

ಜ್ವರೆವ್​ ನಿನ್ನೆ ನಡೆದ ಫೈನಲ್​ ಪಂದ್ಯದಲ್ಲಿ ಆಸ್ಟ್ರೀಯಾದ ಡೊಮಿನಿಕ್ ಥೀಮ್​ ವಿರುದ್ಧ 6-2,6-4, 4-6,3-6, 7-6 ಅಂತರದಿಂದ ಸೋಲುಕಂಡರು. ಮೊದಲೆರಡು ಸೆಟ್​ಗಳಲ್ಲಿ ಭರ್ಜರಿಯಾಗಿ ಆಡಿ ಗೆದ್ದ ಜರ್ಮನ್ ಆಟಗಾರ ನಂತರ ಸತತ 3 ಸೆಟ್​ಗಳಲ್ಲಿ ಕಠಿಣ ಹೋರಾಟದ ನಡುವೆಯೂ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ವಿಫಲರಾದರು.

ಅಲೆಕ್ಸಾಂಡರ್​ ಜ್ವರೆವ್
ಅಲೆಕ್ಸಾಂಡರ್​ ಜ್ವರೆವ್

By

Published : Sep 14, 2020, 5:47 PM IST

ನ್ಯೂಯಾರ್ಕ್​:ಭಾನುವಾರ ಕೊನೆಗೊಂಡ ಯುಎಸ್​ ಓಪನ್​ನಲ್ಲಿ ರನ್ನರ್​ ಅಪ್​ ಆದ ಜರ್ಮನಿಯ ಅಲೆಕ್ಸಾಂಡರ್​ ಜ್ವರೆವ್​ ಭವಿಷ್ಯದಲ್ಲಿ ಅನೇಕ ಅವಕಾಶಗಳನ್ನು ಪಡೆಯಲಿದ್ದೇನೆ, ಒಂದಲ್ಲ ಒಂದು ದಿನ ಗ್ರಾಂಡ್​ಸ್ಲಾಮ್ ಗೆದ್ದೇ ಗೆಲ್ಲುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ.

ಜ್ವರೆವ್​ ನಿನ್ನೆ ನಡೆದ ಫೈನಲ್​ ಪಂದ್ಯದಲ್ಲಿ ಆಸ್ಟ್ರೀಯಾದ ಡೊಮಿನಿಕ್ ಥೀಮ್​ ವಿರುದ್ಧ 6-2,6-4, 4-6,3-6, 7-6 ಅಂತರದಿಂದ ಸೋಲುಕಂಡರು. ಮೊದಲೆರಡು ಸೆಟ್​ಗಳಲ್ಲಿ ಭರ್ಜರಿಯಾಗಿ ಆಡಿ ಗೆದ್ದ ಜರ್ಮನ್ ಆಟಗಾರ ನಂತರ ಸತತ 3 ಸೆಟ್​ಗಳಲ್ಲಿ ಕಠಿಣ ಹೋರಾಟದ ನಡುವೆಯೂ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ವಿಫಲರಾದರು.

ಪಂದ್ಯದ ನಂತರ ಮಾತನಾಡಿದ ಜ್ವರೆವ್​, ಮೊದಲ ಗ್ರಾಂಡ್​ಸ್ಲಾಮ್​ ಪ್ರಶಸ್ತಿಗೆ ಡೊಮಿನಿಕ್​ಗೆ ಮೊದಲು ನಾನು ಅಭಿನಂದನೆ ಸಲ್ಲಿಸುತ್ತೇನೆ. ನೀವು ಹಲವು ಸಂದರ್ಭಗಳಲ್ಲಿ ಪ್ರಶಸ್ತಿಯನ್ನು ತಪ್ಪಿಸಿಕೊಂಡಿದ್ದರಿಂದ ನಾನು ಟ್ರೋಫಿಯನ್ನು ಎತ್ತಿ ಹಿಡಿಯಬಹುದೆಂದು ಭಾವಿಸಿದ್ದೆ. ಆದರೆ ನಾನು ಇಲ್ಲಿ ರನ್ನರ್​ ಅಪ್​ ಭಾಷಣ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನ ಜೊತೆಯಿದ್ದು ಬೆಂಬಲ ನೀಡಿದ ನನ್ನ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಟೆನ್ನಿಸ್​ ಕೆರಿಯರ್​ನಲ್ಲಿ ಕಳೆದ ಎರಡು ವರ್ಷ ನನಗೆ ಸುಲಭವಾಗಿರಲಿಲ್ಲ. ಆದರೆ ನಾವು ಖಂಡಿತವಾಗಿಯೂ ಸರಿಯಾದ ದಾರಿಯಲ್ಲಿದ್ದೇವೆ. ಒಂದು ದಿನ ಖಂಡಿತ ನಾವು ಒಟ್ಟಿಗೆ ಟ್ರೋಫಿ ಎತ್ತಿ ಹಿಡಿಯಲಿದ್ದೇವೆ ಎಂದು 23 ವರ್ಷದ ಜ್ವರೆವ್​ ಭಾವುಕರಾದರು.

ನಾನು ಗ್ರಾಂಡ್​ಸ್ಲಾಮ್​ ಚಾಂಪಿಯನ್​ ಪಟ್ಟಕ್ಕೆ ತುಂಬಾ ಹತ್ತಿರಬಂದಿದ್ದೆ. ಅದಕ್ಕೆ ಕೆಲವೇ ಪಾಯಿಂಟ್​ಗಳ ಅಂತರದಲ್ಲಿದ್ದೆ. ಆದರೆ ಮೂರನೇ ಸೆಟ್​ಗಿಂತ 5ನೇ ಸೆಟ್​ನಲ್ಲಿ ಉತ್ತಮ ಅವಕಾಶವಿದ್ದರೂ ನಾನು ಅದನ್ನು ಬಳಸಿಕೊಳ್ಳಲಿಲ್ಲ ಎಂದು ಜ್ವರೆವ್​ ತಿಳಿಸಿದರು.

ನನಗೆ ಕೇವಲ 23 ವರ್ಷ. ಇದು ನನ್ನ ಕೊನೆಯ ಅವಕಾಶ ಎಂದು ನಾನು ಭಾವಿಸುವುದಿಲ್ಲ. ನಾನು ಮುಂದೊಂದು ದಿನ ಗ್ರಾಂಡ್​ಸ್ಲಾಮ್​ ಚಾಂಪಿಯನ್ ಆಗುತ್ತೇನೆ ಎಂಬ ನಂಬಿಕೆ ನನ್ನಲ್ಲಿದೆ ಎಂದಿದ್ದಾರೆ.

ABOUT THE AUTHOR

...view details