ಲಂಡನ್: ಇತ್ತೀಚೆಗೆ ಮುಗಿದ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಪೋಲೆಂಡ್ನ ಹ್ಯೂಬರ್ಟ್ ಹರ್ಕಜ್ ನೂತನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ 7 ಸ್ಥಾನ ಏರಿಕೆ ಕಂಡು 11ನೇ ಸ್ಥಾನಕ್ಕೆ ಏರಿಕೆ ಕಾಣುವ ಮೂಲಕ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ವಿಂಬಲ್ಡನ್ನ ಆರಂಭಿಕ ಸುತ್ತಿನಲ್ಲಿ 2ನೇ ಶ್ರೇಯಾಂಕದ ಮೆಡ್ವಡೆವ್ಗೆ ಸೋಲುಣಿಸಿದ್ದ ಹರ್ಕಜ್ ಕ್ವಾರ್ಟರ್ ಫೈನಲ್ನಲ್ಲಿ 20 ಗ್ರ್ಯಾಂಡ್ ಸ್ಲಾಮ್ ಒಡೆಯ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಅವರನ್ನು 6-3,7-6, 6-0ಯ ದಾಖಲೆಯ ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಟೂರ್ನಿಗೆ ಮುಂಚೆ 18 ಶ್ರೇಯಾಂಕದಲ್ಲಿದ್ದ ಅವರು ವಿಂಬಲ್ಡನ್ ನಂತರ 11ನೇ ಶ್ರೇಯಾಂಕಕ್ಕೆ ಬಡ್ತಿ ಪಡೆದಿದ್ದಾರೆ.