ಕರ್ನಾಟಕ

karnataka

ETV Bharat / sports

'ಮನ್​​ ಕಿ ಬಾತ್'​ನಲ್ಲಿ ಯುಎಸ್​ ಓಪನ್ ಟೆನಿಸ್ ಟೂರ್ನಿ ಪ್ರಸ್ತಾಪಿಸಿದ ಮೋದಿ: ಕಾರಣ? - ಮನ್​​ ಕಿ ಬಾತ್​ನಲ್ಲಿ ಯುಎಸ್​ ಓಪನ್ ಟೆನಿಸ್ ಟೂರ್ನಿ ಪ್ರಸ್ತಾಪ

ಇತ್ತೀಚೆಗೆ ಮುಕ್ತಾಯವಾದ ಯುಎಸ್​ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ ದೇಶದ ಟೆನಿಸ್ ತಾರೆ ರಫೆಲ್ ನಡಾಲ್ ಎದುರಾಳಿಯಾಗಿ ಉಪಾಂತ್ಯ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ ರಷ್ಯಾದ ಡೆನಿಯಲ್ ಮೆಡ್ವೆಡೆವ್ ಹೆಸರು ಮೋದಿ ಉಲ್ಲೇಖಿಸಲು ಕಾರಣವಾಗಿದ್ದು ಆತನ ಸರಳತೆ..!

'ಮನ್​​ ಕಿ ಬಾತ್'​ನಲ್ಲಿ ಯುಎಸ್​ ಓಪನ್ ಟೆನಿಸ್ ಟೂರ್ನಿ ಪ್ರಸ್ತಾಪಿಸಿದ ಮೋದಿ

By

Published : Sep 29, 2019, 6:30 PM IST

ನವದೆಹಲಿ: ಪ್ರಧಾನಿ ಮೋದಿಯ ರೇಡಿಯೋ ಕಾರ್ಯಕ್ರಮ 'ಮನ್​​ ಕಿ ಬಾತ್​'ನಲ್ಲಿ ಯುಎಸ್​ ಓಪನ್​ ಫೈನಲಿಸ್ಟ್ ರಷ್ಯಾದ ಡೆನಿಯಲ್ ಮೆಡ್ವೆಡೆವ್ ಹೆಸರನ್ನು ಪ್ರಸ್ತಾಪಿಸಿ ಹಲವರ ಅಚ್ಚರಿಗೆ ಕಾರಣರಾದರು.

ಇತ್ತೀಚೆಗೆ ಮುಕ್ತಾಯವಾದ ಯುಎಸ್​ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ ದೇಶದ ಟೆನಿಸ್ ತಾರೆ ರಫೇಲ್ ನಡಾಲ್ ಎದುರಾಳಿಯಾಗಿ ಉಪಾಂತ್ಯ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ ರಷ್ಯಾದ ಡೆನಿಯಲ್ ಮೆಡ್ವೆಡೆವ್ ಹೆಸರು ಮೋದಿ ಉಲ್ಲೇಖಿಸಲು ಕಾರಣವಾಗಿದ್ದು ಆತನ ಸರಳತೆ..!

ಮೆಡ್ವೆಡೆವ್ ಕೆಚ್ಚೆದೆಯ ಹೋರಾಟ ವ್ಯರ್ಥ... ನಡಾಲ್ ಮುಡಿಗೆ ಯುಎಸ್​ ಓಪನ್

ಮನ್​ ಕಿ ಬಾತ್​ನಲ್ಲಿ ಮೋದಿ ಹೇಳಿದಂತೆ, ನಾನು ನಿಮ್ಮಲ್ಲರಂತೆ ಓರ್ವ ಸಾಮಾನ್ಯ ಮನುಷ್ಯ. ಶ್ರೀಸಾಮಾನ್ಯನಿಗೆ ಬಂದೊದಗುವ ಎಲ್ಲ ಸಮಸ್ಯೆ ಹಾಗೂ ಕಷ್ಟಗಳು ನನಗೆ ಎದುರಾಗುತ್ತವೆ. ಅಂತೆಯೇ ದೇಶದ ಆಗುಹೋಗುಗಳನ್ನು ನಾನು ಗಮನಿಸುತ್ತಲೇ ಇರುತ್ತೇನೆ. ನಾನು ಇತ್ತೀಚೆಗೆ ಯುಎಸ್​ ಓಪನ್ ಫೈನಲ್ ಪಂದ್ಯ ವೀಕ್ಷಿಸಿದ್ದೆ ಮತ್ತು ಮೆಡ್ವೆಡೆವ್ ಮಾತುಗಳನ್ನೂ ಆಲಿಸಿದ್ದೆ. ಆತನ ಸರಳ ಸ್ವಭಾವ ಹಾಗೂ ಮಾತಿನಲ್ಲಿ ಇದ್ದ ಪ್ರಬುದ್ಧತೆ ನನಗೆ ತುಂಬಾ ಇಷ್ಟವಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೆಡ್ವೆಡೆವ್ ಏನು ಹೇಳಿದ್ದರು...?

ಇತ್ತೀಚಿನ ದಿನಗಳಲ್ಲಿ ಎದುರಾಳಿ ಆಟಗಾರನನ್ನು ಪ್ರಶಂಸಿಸುವ ನಿಜವಾದ ಕ್ರೀಡಾಮನೋಭಾವ ಮರೆಯಾಗುತ್ತಿದೆ. ಆದರೆ ಮೆಡ್ವೆಡೆವ್ ಎದುರಾಳಿ ನಡಾಲ್ ಆಟವನ್ನು ಕೊಂಡಾಡಿದ್ದು, ನಿಮ್ಮ ಎದುರು ಆಡುವುದು ಅತ್ಯಂತ ಕಷ್ಟ ಎಂದು ಮೆಡ್ವಡೆವ್ ಹೇಳಿದ್ದರು.

ಡೆನಿಯಲ್ ಮೆಡ್ವೆಡೆವ್

ನನ್ನ ಫೈನಲ್ ತನಕದ ಹಾದಿಯನ್ನು ನಡಾಲ್ ಕೊಂಡಾಡಿದ್ದರು. ಆದರೆ ನಡಾಲ್ ಓರ್ವ ಅದ್ಭುತ ಆಟಗಾರ. ನಡಾಲ್ ಆಟವನ್ನು ನೋಡುವುದೇ ಒಂದು ಆನಂದ ಎಂದು ಮೆಡ್ವಡೆವ್ ಫೈನಲ್ ಪಂದ್ಯದ ಬಳಿಕ ಹೇಳಿದ್ದರು. ಸದ್ಯ ಮೋದಿ ಮೆಡ್ವಡೆವ್ ಕ್ರೀಡಾ ಮನೋಭಾವವನ್ನು ಪ್ರಶಂಸಿಸಿದ್ದಾರೆ.

23 ವರ್ಷದ ಮೆಡ್ವೆಡೆವ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ನಡಾಲ್ ಎದುರು 5-7, 3-6, 7-5, 6-4, 4-6 ಸೆಟ್​ಗಳಿಂದ ಸೋಲನುಭವಿಸಿದ್ದರು.

ABOUT THE AUTHOR

...view details