ಹ್ಯಾನೋವರ್ (ಜರ್ಮನಿ): ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂಬರುವ ಆವೆ ಮಣ್ಣಿನ ಫ್ರೆಂಚ್ ಓಪನ್ ಟೆನ್ನಿಸ್ ಗ್ರ್ಯಾಂಡ್‌ಸ್ಲಾಂ ಟೂರ್ನಿಯನ್ನು 1,18,000 ಕ್ಕೂ ಅಧಿಕ ಕ್ರೀಡಾಭಿಮಾನಿಗಳಿಗೆ ವೀಕ್ಷಿಸಲಿದ್ದಾರೆ. ಇದೇ ಮೊದಲ ಬಾರಿಗೆ ರಾತ್ರಿ ವೇಳೆಯಲ್ಲೂ ಹೊನಲು ಬೆಳಕಿನ ಪಂದ್ಯ ಆಯೋಜನೆಯಾಗಿದೆ.
ರೊಲ್ಯಾಂಡ್ ಗ್ಯಾರೋಸ್ ಗ್ರೌಂಡ್ನಲ್ಲಿ ಮೊದಲ 10 ದಿನಗಳ ಕಾಲ ನಡೆಯುವ ಮೂರು ಶೋ ಕೋರ್ಟ್ಗಳಲ್ಲಿ ತಲಾ 1 ಸಾವಿರ ಜನರಂತೆ ಹೆಚ್ಚುವರಿ 5 ಸಾವಿರದಷ್ಟು ಜನರಿಗೆ ಅವಕಾಶ ನೀಡಲಾಗುವುದು. ಉಳಿದವರಿಗೆ ಹೊರಗಡೆ ವ್ಯವಸ್ಥೆ ಮಾಡಲಾಗುವುದು. ಉಳಿದ 5 ದಿನಗಳ ಕಾಲ ಎಲ್ಲಾ ಪಂದ್ಯಾವಳಿಗಳು ಶೋ ಕೋರ್ಟ್ ಒಳಗಡೆ ಮಾತ್ರ ನಡೆಯುವುದರಿಂದ 3 ಕೋರ್ಟ್ಗಳಲ್ಲೂ 5 ಸಾವಿರಷ್ಟು ಅಭಿಮಾನಿಗಳಿಗೆ ಅವಕಾಶ ನೀಡಲಾಗುವುದು ಎಂದು ಆಯೋಜಕರು ಹೇಳಿದ್ದಾರೆ.
ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿರುವ ಪ್ರಮುಖ ಟೆನ್ನಿಸ್ ಟೂರ್ನಿಯನ್ನು ಮೇ 30 ರಿಂದ ಜೂನ್ 13 ರವರೆಗೆ ನಡೆಸಲಾಗುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ -ಅಕ್ಟೋಬರ್ನಲ್ಲಿ ಟೂರ್ನಮೆಂಟ್ ನಡೆದಿತ್ತು. ಆ ಸಂದರ್ಭದಲ್ಲಿ ಕೋವಿಡ್ ಕಾರಣದಿಂದಾಗಿ ಕೇವಲ 15 ಸಾವಿರದಷ್ಟು ಜನರಿಗೆ ಮಾತ್ರ ವೀಕ್ಷಣೆಯ ಅವಕಾಶ ನೀಡಲಾಗಿತ್ತು. ಈ ವರ್ಷ ನಿಯಮಗಳು ಸಡಿಲಿಕೆಯಾಗಿದ್ದು ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ.
ಇದನ್ನೂಓದಿ : ಭಾರತ ತಂಡ ಆಸ್ಟ್ರೇಲಿಯಾ ಹಿಂದಿಕ್ಕಲು ದ್ರಾವಿಡ್ ಕಾರಣ: ಗ್ರೇಗ್ ಚಾಪೆಲ್
ಎಲ್ಲಾ ಆಟಗಾರರು ಎರಡು ಬಯೋ ಬಬಲ್ಗಳಲ್ಲಿ ಇರುತ್ತಾರೆ. ಟೂರ್ನಮೆಂಟ್ ದಿನ ನೇರವಾಗಿ ರೊಲ್ಯಾಂಡ್ ಗ್ಯಾರೋಸ್ ಗ್ರೌಂಡ್ಗೆ ತೆರಳಲಿದ್ದು, ಅವರೊಂದಿಗೆ ಕೇವಲ ಇಬ್ಬರು ಹೆಚ್ಚುವರಿ ಜನರು ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಈ ವರ್ಷ, ಪುರುಷ ಮತ್ತು ಮಹಿಳೆಯರ ಎರಡೂ ತಂಡಗಳಿಗೆ ಸೆಂಟರ್ ಕೋರ್ಟ್ನಲ್ಲಿ ಫ್ಲಡ್ ಲೈಟ್ ಪಂದ್ಯಾವಳಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.