ಕರ್ನಾಟಕ

karnataka

ETV Bharat / sports

ಫ್ರೆಂಚ್ ಓಪನ್​: 487 ದಿನಗಳ ಬಳಿಕ ಗ್ರ್ಯಾಂಡ್​ಸ್ಲಾಮ್​ನಲ್ಲಿ ಮೊದಲ ಜಯ ಸಾಧಿಸಿದ ಫೆಡರರ್​ - ಫ್ರೆಂಚ್ ಓಪನ್​ 2021

39 ವರ್ಷದ 8ನೇ ಶ್ರೇಯಾಂಕದ ಸ್ಟಾರ್ ಕೊನೆಯ ಬಾರಿ 2020ರ ಆಸ್ಟ್ರೇಲಿಯಾ ಓಪನ್​ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಸರ್ಜರಿಗೆ ಒಳಗಾಗಿದ್ದ ಅವರು ಕಳೆದ ವಾರ ಟೆನಿಸ್​ಗೆ ಮರಳಿದ್ದರು. ಇಂದು ಗ್ರ್ಯಾಂಡ್​ಸ್ಲಾಮ್​ನಲ್ಲೂ ಒಂದು ಸರ್ವ್​ ಕಳೆದುಕೊಳ್ಳದೆ ಗೆಲುವು ಸಾಧಿಸಿದ್ದಾರೆ.

ರೋಜರ್​ ಫೆಡರರ್​
ರೋಜರ್​ ಫೆಡರರ್​

By

Published : Jun 1, 2021, 3:33 AM IST

Updated : Jun 1, 2021, 6:06 AM IST

ಪ್ಯಾರಿಸ್: ಗಾಯದ ಕಾರಣ 2020ರ ಆಸ್ಟ್ರೇಲಿಯಾ ಓಪನ್​ ನಂತರ ಟೆನಿಸ್​ ಅಂಗಳದಿಂದ ದೂರ ಉಳಿದಿದ್ದ 20 ಗ್ರ್ಯಾಂಡ್​ಸ್ಲಾಮ್ ವಿಜೇತ ರೋಜರ್​ ಫೆಡರರ್​ ಸೋಮವಾರ ಫ್ರೆಂಚ್​ ಓಪನ್​ನಲ್ಲಿ ಶುಭಾರಂಭಮಾಡಿದ್ದಾರೆ.

ಬರೋಬ್ಬರಿ 487 ದಿನಗಳ ಬಳಿಕ ಮೇಜರ್​ ಟೂರ್ನಿಯಲ್ಲಿ ಆಡಿದ ಫೆಡರರ್​ ಮೊದಲ ಸುತ್ತಿನ ಪಂದ್ಯದಲ್ಲಿ ಉಜ್ಬೆಕಿಸ್ತಾನದ ಕ್ವಾಲಿಫೈಯರ್ ಡೇನಿಸ್ ಇಸ್ಟೊಮಿನ್​​ ವಿರುದ್ಧ 6-2, 6-4, 6-3ರ ಸೆಟ್​ಗಳ ಅಂತರದಲ್ಲಿ ಸುಲಭ ಜಯ ಸಾಧಿಸಿದರು.

39 ವರ್ಷದ 8ನೇ ಶ್ರೇಯಾಂಕದ ಸ್ಟಾರ್ ಕೊನೆಯ ಬಾರಿ 2020ರ ಆಸ್ಟ್ರೇಲಿಯಾ ಓಪನ್​ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಸರ್ಜರಿಗೆ ಒಳಗಾಗಿದ್ದ ಅವರು ಕಳೆದ ವಾರ ಟೆನಿಸ್​ಗೆ ಮರಳಿದ್ದರು. ಇಂದು ಗ್ರ್ಯಾಂಡ್​ಸ್ಲಾಮ್​ನಲ್ಲೂ ಒಂದು ಸರ್ವ್​ ಕಳೆದುಕೊಳ್ಳದೆ ಗೆಲುವು ಸಾಧಿಸಿದ್ದಾರೆ.

21ನೇ ಗ್ರ್ಯಾಂಡ್​ ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸ್ವಿಸ್ ಆಟಗಾರ ಮುಂದಿನ ಸುತ್ತಿನಲ್ಲಿ 2014ರ ಯುಎಸ್​ ಓಪನ್​ ಚಾಂಪಿಯನ್​ ಕ್ರೊವೆಸಿಯಾದ ಮರಿನ್ ಸಿಲಿಕ್​ ಸವಾಲನ್ನು ಎದುರಿಸಲಿದ್ದಾರೆ.

ಇನ್ನು ಇತರೆ ಪಂದ್ಯಗಳಲ್ಲಿ 2ನೇ ಶ್ರೇಯಾಂಕದ ಡೇನಿಲ್ ಮಡ್ವೆಡೆವ್​ ಕಜಕಸ್ತಾನದ ಅಲೆಕ್ಸಾಂಡರ್​ ಬಬ್ಲಿಕ್​ ವಿರುದ್ಧ 6-3, 6-3, 7-5ರಲ್ಲಿ ಗೆಲುವು ಸಾಧಿಸಿದರು. ಇದು ಅವರ ವೃತ್ತಿ ಜೀವನದ ಮೊದಲ ರೋಲ್ಯಾಂಡ್ ಗ್ಯಾರೋಸ್​ ಗೆಲುವಾಗಿದೆ.

ಇದನ್ನು ಓದಿ:ಏಷ್ಯನ್​ ಚಾಂಪಿಯನ್​​ಶಿಪ್: ಚಿನ್ನ ಗೆದ್ದ ಸಂಜೀತ್, ಬೆಳ್ಳಿಗೆ ತೃಪ್ತಿಪಟ್ಟ ಪಂಘಲ್

Last Updated : Jun 1, 2021, 6:06 AM IST

ABOUT THE AUTHOR

...view details