ಕರ್ನಾಟಕ

karnataka

ETV Bharat / sports

ಫ್ರೆಂಚ್ ಓಪನ್: ಫೈನಲ್​ಗೆ ಲಗ್ಗೆಯಿಟ್ಟ ಜೋಕೊವಿಕ್​ಗೆ ನಡಾಲ್​ ಎದುರಾಳಿ - ನೊವಾಕ್ ಜೋಕೊವಿಕ್​ 18ನೇ ಗ್ರ್ಯಾಂಡ್​ಸ್ಲಾಮ್

ಭಾನುವಾರ ನಡೆಯುವ ಪಂದ್ಯದಲ್ಲಿ ನಡಾಲ್​ ಗೆದ್ದರೆ ವಿಶ್ವದಲ್ಲಿ ಹೆಚ್ಚು ಗ್ರ್ಯಾಂಡ್ ಸ್ಲಾಮ್​ ಗೆದ್ದ ಟೆನಿಸ್ ಪ್ಲೇಯರ್ ಎಂಬ ದಾಖಲೆಯನ್ನು ಫೆಡರರ್ ​ಜೊತೆ ಹಂಚಿಕೊಳ್ಳಲಿದ್ದಾರೆ. ಜೋಕೊವಿಕ್ ಗೆದ್ದರೆ, 18 ಗ್ರ್ಯಾಂಡ್​ಸ್ಲಾಮ್​ ಜೊತೆಗೆ, ಕಳೆದ 50 ವರ್ಷಗಳಲ್ಲಿ ಎಲ್ಲಾ ಗ್ರ್ಯಾಂಡ್​ ಸ್ಲಾಮ್​ಗಳನ್ನು 2 ಬಾರಿ ಗೆದ್ದ ಪ್ರಥಮ ಆಟಗಾರ ಎನಿಸಿಕೊಳ್ಳಲಿದ್ದಾರೆ. .

Novak Djokovic vs Rafael Nadal
Novak Djokovic vs Rafael Nadal

By

Published : Oct 10, 2020, 4:10 PM IST

ಪ್ಯಾರಿಸ್​: ಗ್ರೀಕ್​ನ ಸ್ಟೆಫನೋಸ್ ಸಿಟ್ಸಿಪಾಸ್​ ವಿರುದ್ಧ 5 ಸೆಟ್​ಗಳ ಹೋರಾಟದಲ್ಲಿ ಗೆದ್ದ ವಿಶ್ವದ ನಂಬರ್​ ಒನ್ ಆಟಗಾರ ನೊವಾಕ್ ಜೋಕೊವಿಕ್​ ಫ್ರೆಂಚ್​ ಓಪನ್ ಫೈನಲ್​ ಪ್ರವೇಶಿಸಿದ್ದಾರೆ.

ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಸರ್ಬಿಯನ್ ಸ್ಟಾರ್​ 6-3, 6-2, 5-7, 4-6, 6-1 ರ ಸುದೀರ್ಘ ಸೆಟ್​ಗಳ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದರು.

ಜೋಕೊವಿಕ್

2016ರ ಚಾಂಪಿಯನ್​ ನೊವಾಕ್​ ಮೊದಲೆರಡು ಸೆಟ್​ಗಳನ್ನು ಸುಲಭವಾಗಿ ಗೆದ್ದರೂ 3 ಮತ್ತು 4 ಸೆಟ್​ಗಳನ್ನು ಸೋಲು ಕಂಡರು. ಆದರೆ ಅಂತಿಮ ಸೆಟ್​ನಲ್ಲಿ ಪ್ರಾಬಲ್ಯ ಸಾಧಿಸಿ ಫೈನಲ್​ ಪ್ರವೇಶಿಸಿದರು.

ಜೋಕೊವಿಕ್ ಫೈನಲ್​ ಪಂದ್ಯದಲ್ಲಿ 12 ಬಾರಿಯ ಫ್ರೆಂಚ್​ ಓಪನ್​ ಚಾಂಪಿಯನ್​ ಆಗಿರುವ ಸ್ಪೇನ್​ನ ನಡಾಲ್​ ಅವರನ್ನು ಎದುರಿಸಲಿದ್ದಾರೆ.

ABOUT THE AUTHOR

...view details