ಪ್ಯಾರಿಸ್: ವಿಶ್ವದ ನಂಬರ್ 1 ಆಟಗಾರ ನೊವಾಕ್ ವಿರುದ್ಧ ಕೆಚ್ಚೆದೆಯ ಪ್ರದರ್ಶಿಸಿದ ಇಟಲಿಯ ಯುವ ಟೆನಿಸ್ ಆಟಗಾರ ಲೊರೆಂಜೊ ಮುಸೆಟ್ಟಿ ಕೊನೆಗೂ 7(9)-6(7), 7(7)-6(2), 1-6, 0-6, 04 ಅಂತದಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು.
ಪಿಲ್ಲಪ್ಪೆ ಚೇಟ್ರಿಯರ್ನಲ್ಲಿ ನಡೆದ ಪಂದ್ಯದಲ್ಲಿ 76ನೇ ಶ್ರೇಯಾಂಕದ ಮುಸೆಟ್ಟಿ 18 ಗ್ರ್ಯಾಂಡ್ ಸ್ಲಾಮ್ ವಿನ್ನರ್ ಎದುರು ನಂಬಲಾಸಾಧ್ಯವಾದ ಪ್ರದರ್ಶನ ತೋರಿದರು. ಮೊದಲೆರಡು ಸೆಟ್ಗಳನ್ನ 7(9)-6(7), 7(7)-6(2)ರಲ್ಲಿ ಗೆಲ್ಲುವ ಮೂಲಕ ಜೋಕೊವಿಕ್ಗೆ ಆಘಾತ ನೀಡಿದ್ದರು.
ಆದರೆ ನೇ ಸೆಟ್ನಿಂಗ ತನ್ನ ಅನುಭವವನ್ನು ತೋರಿದ ಅಗ್ರಕ್ರಮಾಂಕದ ಆಟಗಾರ 19 ವರ್ಷದ ಇಟಿಯ ಯುವಕನನ್ನು ಸುಲಭವಾಗಿ ಎರಡು ಸೆಟ್ಗಳಲ್ಲಿ ಸೋಲುಕಂಡು ನಿವೃತ್ತಿಯಾದರು. 3 ಮತ್ತು 4ನೇ ಸೆಟ್ನಲ್ಲಿ 6-1 ಮತ್ತು 6-0ಯಲ್ಲಿ ಗೆದ್ದ ಜೋಕೊವಿಕ್, ನಿರ್ಣಾಯಕ ಸೆಟ್ನಲ್ಲಿ 4-0ಯಲ್ಲಿ ಮುನ್ನಡೆಯಲ್ಲಿದ್ದಾಗ ಮುಸೆಟ್ಟಿ ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡರು.