ಕರ್ನಾಟಕ

karnataka

ETV Bharat / sports

ಕೊರೊನಾ ಎಫೆಕ್ಟ್​​ : ಫ್ರೆಂಚ್ ಓಪನ್ ಟೆನ್ನಿಸ್‌ ಮುಂದೂಡುವ ಸಾಧ್ಯತೆ

ಫ್ರಾನ್ಸ್ ದೇಶದಲ್ಲಿ ಶನಿವಾರದಿಂದ ರಾಷ್ಟ್ರವ್ಯಾಪಿ ಮೂರನೇ ಹಂತದ ಲಾಕ್‌ಡೌನ್ ಘೋಷಣೆಯಾಗಿದೆ. ಇದೇ ಸಂದರ್ಭದಲ್ಲಿ ಈ ಬಾರಿಯ ಫ್ರೆಂಚ್ ಓಪನ್‌ ಟೆನ್ನಿಸ್ ಟೂರ್ನಿ ಮುಂದೂಡಿಕೆ ಸಾಧ್ಯತೆಯೂ ಕಾಣುತ್ತಿದೆ.

French Open
ಫ್ರೆಂಚ್ ಓಪನ್

By

Published : Apr 5, 2021, 9:19 AM IST

ಪ್ಯಾರಿಸ್: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಪರಿಣಾಮ ಫ್ರೆಂಚ್ ಓಪನ್ ಟೆನ್ನಿಸ್‌ ಟೂರ್ನಿಯನ್ನು ಮುಂದೂಡಬಹುದು ಎಂದು ಫ್ರಾನ್ಸ್​​ ​​​ದೇಶದ ಕ್ರೀಡಾ ಸಚಿವ ರೊಕ್ಸಾನಾ ಮರಸಿನಾನು ತಿಳಿಸಿದ್ದಾರೆ.

"ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಫ್ರೆಂಚ್ ಓಪನ್ ಟೂರ್ನಿ ಸೇರಿದಂತೆ ಎಲ್ಲಾ ಕ್ರೀಡೆಗಳು ಮತ್ತು ಪ್ರಮುಖ ಸಮಾರಂಭಗಳ ದಿನಾಂಕವನ್ನು ಬದಲಾಯಿಸುವ ಬಗ್ಗೆ ನಾವು ಫ್ರೆಂಚ್ ಟೆನಿಸ್ ಫೆಡರೇಶನ್ ಜೊತೆ ಚರ್ಚಿಸುತ್ತಿದ್ದೇವೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ಮಿಯಾಮಿ ಓಪನ್​: ಒಸಾಕರ ಜೈತ್ರಯಾತ್ರೆಗೆ ಬ್ರೇಕ್ ಹಾಕಿ ನಾಕೌಟ್​ ಪ್ರವೇಶಿಸಿದ ಸಕ್ಕರಿ

ಫ್ರಾನ್ಸ್ ದೇಶದಲ್ಲಿ ಶನಿವಾರದಿಂದ ರಾಷ್ಟ್ರವ್ಯಾಪಿ ಮೂರನೇ ಹಂತದ ಲಾಕ್‌ಡೌನ್ ಘೋಷಣೆಯಾಗಿದ್ದು, ಮೇ ವೇಳೆಗೆ ಕೊನೆಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ABOUT THE AUTHOR

...view details