ಕರ್ನಾಟಕ

karnataka

ETV Bharat / sports

ಮೇನಲ್ಲಿ ನಡೆಯಬೇಕಿದ್ದ ಫ್ರೆಂಚ್​ ಓಪನ್​ ಸೆಪ್ಟೆಂಬರ್​ಗೆ ಮುಂದೂಡಿಕೆ

ಮಣ್ಣಿನಂಕಣದಲ್ಲಿ ನಡೆಯುವ ಈ ಗ್ರ್ಯಾಂಡ್​ಸ್ಲಾಮ್​ ಟೂರ್ನಿ ಮೇ24ರಿಂದ ಜೂನ್​ 7ರ ವರೆಗೆ ನಿಗದಿಯಾಗಿತ್ತು. ಆದರೆ ಜಗತ್ತಿನಾದ್ಯಂತ ಕೊರೊನಾ ಸಾಂಕ್ರಾಮಿಕ ವೈರಸ್​ ಹರಡುತ್ತಿರುವುದರಿಂದ ಸೆಪ್ಟೆಂಬರ್​ವರೆಗೆ ಈ ಟೂರ್ನಮೆಂಟ್​ಅನ್ನು ಮುಂದೂಡಲಾಗಿದೆ.

ಫ್ರೆಂಚ್​ ಓಪನ್​ 2020
ಫ್ರೆಂಚ್​ ಓಪನ್​ 2020

By

Published : Apr 26, 2020, 11:00 AM IST

ಪ್ಯಾರಿಸ್​: ಮೇ 24ರಿಂದ ಆರಂಭವಾಗಬೇಕಿದ್ದ 2020ರ ಫ್ರೆಂಚ್​ ಓಪನ್​ ಕೊರೊನಾ ವೈರಸ್​ ಭೀತಿಯಿಂದ ಸೆಪ್ಟೆಂಬರ್​ನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಮಣ್ಣಿನಂಕಣದಲ್ಲಿ ನಡೆಯುವ ಈ ಗ್ರ್ಯಾಂಡ್​ಸ್ಲಾಮ್​ ಟೂರ್ನಿ ಮೇ24ರಿಂದ ಜೂನ್​ 7ರ ವರೆಗೆ ನಿಗದಿಯಾಗಿತ್ತು. ಆದರೆ ಜಗತ್ತಿನಾದ್ಯಂತ ಕೊರೊನಾ ಸಾಂಕ್ರಾಮಿಕ ವೈರಸ್​ ಹರಡುತ್ತಿರುವುದರಿಂದ ಸೆಪ್ಟೆಂಬರ್​ವರೆಗೆ ಈ ಟೂರ್ನಮೆಂಟ್​ಅನ್ನು ಮುಂದೂಡಲಾಗಿದೆ.

ಇನ್ನು ಮೊದಲು ಈ ಟೂರ್ನಮೆಂಟ್​ಅನ್ನು ಸೆಪ್ಟೆಂಬರ್​ 20ಕ್ಕೆ ನಿಗದಿಪಡಿಸಲಾಗಿತ್ತು. ಆದರಡ ಪ್ರಮುಖ ದಿನಪತ್ರಿಕೆ ಇದನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡುವ ಸಾಧ್ಯತೆಯಿದೆ.​

ಪ್ರಪಂಚಾದಾದ್ಯಂತ 1,85,000 ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗದುಕೊಂಡಿದ್ದರಿಂದ 2020ರ ವಿಂಬಲ್ಡನ್​ ಗ್ರ್ಯಾಂಡ್​ಸ್ಲಾಮ್​ ಅನ್ನು ಕೂಡ ರದ್ದುಗೊಳಿಸಲಾಗಿದೆ. ಎರಡನೇ ಮಹಾಯುದ್ದದ ನಂತರ ವಿಂಬಲ್ಡನ್​ ಎರಡನೇ ಬಾರಿಗೆ ರದ್ದಾಗಿತ್ತು. ಜೂನ್​ 29ರಿಂದ ಜುಲೈ 12ರವರೆಗೆ ವಿಂಬಲ್ಡನ್​ ನಡೆಯಬೇಕಿತ್ತು. ಇನ್ನು ಯುಎಸ್​ ಓಪನ್​ ಬಗ್ಗೆ ಯಾವುದೇ ನಿರ್ಧಾರ ಕೇಳಿಬಂದಿಲ್ಲ.

ವಿಂಬಲ್ಡನ್​ನ ಮುಖ್ಯ ಕಾರ್ಯ ನಿರ್ವಾಹಕ ರಿಚರ್ಡ್​ ಲೂಯಿಸ್​ ಪ್ರಕಾರ್​ ಈ ವರ್ಷ ಹೆಚ್ಚಿನ ಟೆನ್ನಿಸ್​​ ನಡೆಯುವುದಿಲ್ಲ ಎಂದು ಹೇಳುವುದರಲ್ಲಿ ಅವಾಸ್ತವಿಕವಲ್ಲ ಎಂದು ತಿಳಿಸಿದ್ದಾರೆ.

ABOUT THE AUTHOR

...view details