ಪ್ಯಾರೀಸ್:ವಿಶ್ವದ ನಂ.1 ಆಟಗಾರ ನೊವಾಕ್ ಜೋಕೊವಿಕ್ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಸೆಮಿಫೈನಲ್ನಲ್ಲಿ ಮಣ್ಣಿನ ಅಂಕಣದ ದೊರೆ ಎಂದೇ ಖ್ಯಾತರಾದ ರಾಫೆಲ್ ನಡಾಲ್ ಅವರನ್ನು ಜೋಕೊವಿಕ್ ಎದುರಿಸಲಿದ್ದಾರೆ.
ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಜೋಕೊವಿಕ್ 6-3 6-2 6-7 (5-7) 7-5ರಿಂದ ಇಟಲಿಯ 9ನೇ ಶ್ರೇಯಾಂಕದ ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧ ಜಯಗಳಿಸಿದರು. ಇದಕ್ಕೂ ಮುನ್ನ ನಡಾಲ್ ಅರ್ಜೆಂಟೀನಾದ 10ನೇ ಶ್ರೇಯಾಂಕದ ಸ್ವಾರ್ಟ್ಜ್ಮನ್ ವಿರುದ್ಧ 6-3 4-6 6-4 6-0ರ ಗೆಲುವು ಪಡೆದು 14ನೇ ಸಲ ಸೆಮಿಸ್ಗೆ ಎಂಟ್ರಿ ಕೊಟ್ಟಿದ್ದರು.
ಇಬ್ಬರು ದಿಗ್ಗಜರ ಸೆಮಿಫೈನಲ್ ಮುಖಾಮುಖಿಯು 2021ರ ಫ್ರೆಂಚ್ ಓಪನ್ ಟೂರ್ನಿಯ ರೋಚಕತೆಯನ್ನು ಹೆಚ್ಚಿಸಿದೆ. ಈ ಪಂದ್ಯದ ವೀಕ್ಷಣೆಗೆ 5,000 ಮಂದಿಗೆ ಅವಕಾಶ ನೀಡಲಾಗುತ್ತಿದೆ. ನಡಾಲ್ ಇದುವರೆಗೆ 20 ಗ್ರಾಂಡ್ಸ್ಲಾಂ ಟೂರ್ನಿ ಗೆದ್ದಿದ್ದರೆ, ಜೋಕೊವಿಕ್ 18 ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.