ಪ್ಯಾರಿಸ್ : ವಿಶ್ವ ಟೆನಿಸ್ ಶ್ರೇಯಾಂಕದಲ್ಲಿ 4ನೇ ಶ್ರೇಯಾಂಕಿತ ಹಾಗೂ ಹಾಲಿ ಯುಎಸ್ ಓಪನ್ ಚಾಂಪಿಯನ್ ಡೊಮಿನಿಕ್ ಥೀಮ್ ಫ್ರೆಂಚ್ ಓಪನ್ನ ಮೊದಲ ಸುತ್ತಿನಲ್ಲೇ ಸೋತು ಹೊರ ಬಿದ್ದಿದ್ದಾರೆ.
2 ಬಾರಿ ಫ್ರೆಂಚ್ ಓಪನ್ ರನ್ನರ್ ಅಪ್ ಆಗಿರುವ ಥೀಮ್ರನ್ನು 68ನೇ ಶ್ರೇಯಾಂಕಿತ ಆ್ಯಂಡುಜರ್ 2 ಸೆಟ್ಗಳ ಸೋಲಿನ ನಂತರವೂ ತಿರುಗಿ ಬಿದ್ದು ಮೊದಲ ಸುತ್ತಿನ ಪಂದ್ಯವನ್ನು 4-6, 5-7, 6-3, 6-4,6-4ರಲ್ಲಿ ಗೆದ್ದು ಬೀಗಿದರು. ಇದು ಟಾಪ್ 5 ಶ್ರೇಯಾಂಕಿತ ಆಟಗಾರರ ವಿರುದ್ಧ ಮೊದಲ ಗೆಲುವಾಗಿದೆ.
4 ಗಂಟೆ 28 ನಿಮಿಷಗಳ ಕಾಲ ನಡೆದ ಸುದೀರ್ಘ ನಡೆದ ಪಂದ್ಯದ ಗೆಲುವು ಆ್ಯಂಡುಜರ್ ವೃತ್ತಿ ಜೀವನದ ಅವಿಸ್ಮರಣೀಯ ಗೆಲುವಾಗಿದೆ.
ಅವರು ಎರಡು ವಾರದ ಹಿಂದೆ 20 ಗ್ರ್ಯಾಂಡ್ಸ್ಲಾಮ್ ವಿಜೇತ ರೋಜರ್ ಫೆಡರರ್ರನ್ನು ಸಗಹಾ ಜಿನೆವಾ ಓಪನ್ನ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ನೇರ ಸೆಟ್ಗಳ ಅಂತರದಲ್ಲಿ ಮಣಿಸಿ ಆಶ್ಚರ್ಯ ಮೂಡಿಸಿದ್ದರು.
ಈ ಗೆಲುವು ನನಗೆ ವಿಶೇಷ. ಇನ್ನು ಎಷ್ಟು ವರ್ಷ ಆಡಲಿದ್ದೇನೋ ಗೊತ್ತಿಲ್ಲ. ಏಕೆಂದರೆ, ನನಗೆ 35 ವರ್ಷ ವಯಸ್ಸು. ಅದಕ್ಕಾಗಿ ಈ ಪಂದ್ಯ ನನಗೆ ದೊಡ್ಡ ಉಡುಗೊರೆ. ಹಾಗಾಗಿ, ಫಲಿತಾಂಶ ನನಗೆ ಖುಷಿ ತಂದಿದೆ.
ಎರಡು ವಾರಗಳ ಹಿಂದೆ ಜಿನೆವಾದಲ್ಲಿ ರೋಜರ್ ಫೆಡರರ್ ಮಣಿಸಿದ್ದಾಗಲೂ ಮತ್ತೊಂದು ದೊಡ್ಡ ಉಡುಗೊರೆ ಸಿಕ್ಕಿತ್ತು. ಆ ಗೆಲುವೇ ಥೀಮ್ರನ್ನು ಮಣಿಸಲು ನೆರವಾಗಿದೆ ಎಂದು ಆ್ಯಂಡುಜರ್ ಹೇಳಿದ್ದಾರೆ.
ಇದನ್ನು ಓದಿ: French Open 2021 : ಶುಭಾರಂಭ ಮಾಡಿದ 3 ಗ್ರ್ಯಾಂಡ್ ಸ್ಲಾಮ್ ವಿನ್ನರ್ ಒಸಾಕ