ಅಟ್ಲಾಂಟ: ಅಮೆರಿಕದ ಟೆನ್ನಿಸ್ ಆಟಗಾರ ಫ್ರಾನ್ಸಿಸ್ ಟಿಯಾಫೋ ಅವರು ತಮಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಆಲ್ ಅಮೆರಿಕನ್ ಟೀಮ್ ಕಪ್ನಿಂದ ತಮ್ಮ ಹೆಸರನ್ನು ವಾಪಸ್ ತೆಗೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಆಲ್-ಅಮೇರಿಕನ್ ಟೀಮ್ ಕಪ್ನ ಆರಂಭಿಕ ಪಂದ್ಯದಲ್ಲಿ ಸ್ಯಾಮ್ ಕ್ವೆರ್ರಿ ವಿರುದ್ಧ ಟಿಯಾಫೋ ಸುಮಾರು 450 ಅಭಿಮಾನಿಗಳ ಸಮ್ಮುಖದಲ್ಲಿ ಆಡಿದ್ದರು. ಅವರು ಪಂದ್ಯದ ಮಧ್ಯದಲ್ಲಿ ವೈದ್ಯಕೀಯ ವಿರಾಮ ತೆಗೆದುಕೊಂಡಿದ್ದರು.
ಶನಿವಾರ ಟಿಯಾಫೋ ಟ್ವಿಟರ್ ಮೂಲಕ ಈ ವಿಚಾರ ತಿಳಿಸಿದ್ದು, ಒಂದು ವಾರದ ಫ್ಲೋರಿಡಾದಲ್ಲಿ ತರಬೇತಿ ಪಡೆಯುವಾಗ ನಡೆಸಿದ್ದ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು ಎಂದಿದ್ದಾರೆ.
ಮುಂದಿನ ವಾರದ ಆರಂಭದಲ್ಲಿ ನಾನು ಎರಡನೇ ಪರೀಕ್ಷೆಗೆ ಒಳಗಾಗಲಿದ್ದೇನೆ. ಆದರೆ ಆಟ್ಲಾಂಟಾ ವೈದ್ಯಕೀಯ ಸಿಬ್ಬಂದಿಯ ಸಲಹೆಯ ಮೇರೆಗೆ ಈಗಾಗಲೇ ಕ್ಚಾರಂಟೈನ್ ಪ್ರಾರಂಭಿಸಿದ್ದೇನೆ. ಮತ್ತೆ ಟೆನ್ನಿಸ್ಗೆ ಹಿಂತಿರುಗಲು ನಾನು ಉತ್ಸುಕನಾಗಿದ್ದರೂ ಎಲ್ಲರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕಿದೆ ಎಂದು ಫ್ರಾನ್ಸಿಸ್ ಹೇಳಿದ್ದಾರೆ.