ಕರ್ನಾಟಕ

karnataka

ETV Bharat / sports

ನೊವೆಂಟಿ ಓಪನ್: ಎರಡನೇ ಸುತ್ತು ಪ್ರವೇಶಿಸಿದ ರೋಜರ್ ಫೆಡರರ್​ - ವಿಂಬಲ್ಡನ್​ ರೋಜರ್ ಫೆಡರರ್​

20 ಗ್ರ್ಯಾಂಡ್​ ಸ್ಲಾಮ್ ವಿಜೇತ ಹಾಲೆಯಲ್ಲಿ ನಡೆಯುತ್ತಿರುವ ನೊವೆಂಟಿ ಓಪನ್ ಮೊದಲ ಸುತ್ತಿನಲ್ಲಿ ಬೆಲರೂಸ್​ನ 27 ವರ್ಷದ ಇಲ್ಯಾ ಇವಾಶ್ಕಾ ಅವರನ್ನು 7-6(4) 7-5ರಲ್ಲಿ ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ರೋಜರ್ ಫೆಡರರ್​
ರೋಜರ್ ಫೆಡರರ್​

By

Published : Jun 15, 2021, 3:46 PM IST

ಹಾಲೆ(ಜರ್ಮನಿ): ಫ್ರೆಂಚ್ ಓಪನ್​ನ ನಾಲ್ಕನೇ ಸುತ್ತಿನಿಂದ ಹೊರಬಂದಿದ್ದ ವಿಶ್ವದ 8ನೇ ಶ್ರೇಯಾಂಕದ ರೋಜರ್ ಫೆಡರರ್​ ಸೋಮವಾರ ನೊವೆಂಟಿ ಓಪನ್​ನ ಮೊದಲ ಸುತ್ತಿನಲ್ಲಿ ಶುಭಾರಂಭ ಮಾಡಿದ್ದಾರೆ.

20 ಗ್ರ್ಯಾಂಡ್​ ಸ್ಲಾಮ್ ವಿಜೇತ ಹಾಲೆಯಲ್ಲಿ ನಡೆಯುತ್ತಿರುವ ನೊವೆಂಟಿ ಓಪನ್ ಮೊದಲ ಸುತ್ತಿನಲ್ಲಿ ಬೆಲರೂಸ್​ನ 27 ವರ್ಷದ ಇಲ್ಯಾ ಇವಾಶ್ಕಾ ಅವರನ್ನು 7-6(4) 7-5ರಲ್ಲಿ ಮಣಿಸಿ ಎರಡನೇ ಸುತ್ತಿಗೆ ಪ್ರವೇಶ ಪಡೆದರು.

ವಿಂಬಲ್ಡನ್​ ತಯಾರಿಯಲ್ಲಿರುವ ಟೂರ್ನಿಯಲ್ಲಿ 5ನೇ ಶ್ರೇಯಾಂಕ ಪಡೆದಿರುವ ಸ್ವಿಸ್​ ಸ್ಟಾರ್ ಕೆನಡಾದ ಫೆಲಿಕ್ಸ್ ಅಗರರ್​ ಮತ್ತು ಪೊಲೆಂಡ್​ನ ಹರ್ಬರಟ್ಸ್​ ಹರ್ಕಾಜ್​ ಅವರಿಬ್ಬರಲ್ಲಿ ಗೆದ್ದವರ ಸವಾಲನ್ನು ಎದುರಿಸಲಿದ್ದಾರೆ.

ನಾನು ಗ್ರಾಸ್​ ಕೋರ್ಟ್​ ಅನ್ನು ತುಂಬಾ ಮಿಸ್​ ಮಾಡಿಕೊಂಡಿದ್ದೆ, ಕಳೆದ ಎರಡು ವರ್ಷಗಳಲ್ಲಿ ಈ ಕೋರ್ಟ್​ಗಳಲ್ಲಿ ಆಡಿರಲಿಲ್ಲ. ನಾನು ಹಾರ್ಡ್​ ಕೋರ್ಟ್​ನಲ್ಲಿ ಆಡಿದ್ದೆ, ಕ್ಲೇ ಕೋರ್ಟ್​ನಲ್ಲಿ ಆಡಿದ್ದೆ ಇದೀಗ ಗ್ರಾಸ್​ ಕೋರ್ಟ್​ನಲ್ಲೂ ಭಾಗವಹಿಸಿದ್ದೇನೆ. ಹಾಲೆಗೆ ಮರಳಿ ಬಂದಿರುವುದು ತುಂಬಾ ಅದ್ಭುತವೆನಿಸುತ್ತಿದೆ. ಇಲ್ಲಿ ಆಡುವುದಕ್ಕೆ ನಾನು ತುಂಬಾ ಇಷ್ಟಪಡುತ್ತೇನೆ ಎಂದು ಹಾಲಿ ಚಾಂಪಿಯನ್ ಫೆಡರರ್​ ಹೇಳಿದ್ದಾರೆ.

ಇದನ್ನು ಓದಿ: WATCH: 2 ಸೆಟ್​ ಸೋತರು ತಮ್ಮನ್ನು ಬೆಂಬಲಿಸುತ್ತಿದ್ದ ಪುಟ್ಟ ಅಭಿಮಾನಿಗೆ ಜೋಕೊವಿಕ್ ಉಡುಗೊರೆ

ABOUT THE AUTHOR

...view details