ನವದೆಹಲಿ: ಫೆಬ್ರವರಿ 8 ರಿಂದ ಪ್ರಾರಂಭವಾಗಲಿರುವ ಗ್ರ್ಯಾಂಡ್ ಸ್ಲ್ಯಾಮ್ ನಲ್ಲಿ ಸ್ಪರ್ಧಿಸಲು ಮುಂದಾಗಿರುವ ಅಗ್ರ ಶ್ರೇಯಾಂಕಿತ ಆಟಗಾರರಾದ ನೊವಾಕ್ ಜೊಕೊವಿಕ್, ರಾಫೆಲ್ ನಡಾಲ್, ಡೊಮಿನಿಕ್ ಥೀಮ್, ಸೆರೆನಾ ವಿಲಿಯಮ್ಸ್, ಆಶ್ ಬಾರ್ಟಿ ಮತ್ತು ಸಿಮೋನಾ ಹ್ಯಾಲೆಪ್ ಅವರನ್ನು ಸ್ವಾಗತಿಸಲು ಆಸ್ಟ್ರೇಲಿಯನ್ ಓಪನ್ ಸಿದ್ಧತೆ ನಡೆಸಿದೆ.
ಫೆ.8 ರಿಂದ ಆಸ್ಟ್ರೇಲಿಯನ್ ಓಪನ್; ಸೆಣಸಲಿದ್ದಾರೆ ಅಗ್ರಶ್ರೇಯಾಂಕಿತರು - ಫೆಬ್ರವರಿ 8 ರಿಂದ ಪ್ರಾರಂಭವಾಗಲಿರುವ ಗ್ರ್ಯಾಂಡ್ ಸ್ಲ್ಯಾಮ್
ಅಗ್ರ ಶ್ರೇಯಾಂಕಿತ ಆಟಗಾರರಾದ ನೊವಾಕ್ ಜೊಕೊವಿಕ್, ರಾಫೆಲ್ ನಡಾಲ್, ಡೊಮಿನಿಕ್ ಥೀಮ್, ಸೆರೆನಾ ವಿಲಿಯಮ್ಸ್, ಆಶ್ ಬಾರ್ಟಿ ಮತ್ತು ಸಿಮೋನಾ ಹ್ಯಾಲೆಪ್ ಅವರನ್ನು ಸ್ವಾಗತಿಸಲು ಆಸ್ಟ್ರೇಲಿಯನ್ ಓಪನ್ ಸಿದ್ಧತೆ ನಡೆಸಿದೆ.
ಅಗ್ರ ಶ್ರೇಯಾಂಕಿತರ ಸ್ವಾಗತಕ್ಕೆ ಸಜ್ಜಾದ ಆಸ್ಟ್ರೇಲಿಯನ್ ಓಪನ್
ಪುರುಷರ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಭಾರತದ ಟೆನಿಸ್ ಆಟಗಾರ ಸುಮಿತ್ ನಾಗಲ್ ಕೂಡ ಇದರಲ್ಲಿ ಸ್ಪರ್ಧಿಸಲಿದ್ದಾರೆ. ಸೋಮವಾರ ನಡೆಯಲಿರುವ ಮೊದಲ ಸುತ್ತಿನ ಹಣಾಹಣಿಯಲ್ಲಿ ಇವರು ಲಿಥುವೇನಿಯಾದ ರಿಕಾರ್ಡಾಸ್ ಬೆರಾಂಕಿಸ್ ಅವರನ್ನು ಎದುರಿಸಲಿದ್ದಾರೆ.
ಆಸ್ಟ್ರೇಲಿಯನ್ ಓಪನ್ 2021 ರ ಪಂದ್ಯಾವಳಿಯನ್ನು ಪ್ರೇಕ್ಷಕರು ಸ್ಟೇಡಿಯಂನಲ್ಲಿ ಹಾಜರಿದ್ದು ನೇರವಾಗಿ ವೀಕ್ಷಣೆ ಮಾಡಬಹುದಾಗಿದೆ.