ಟುರಿನ್(ಇಟಲಿ): ಚೀನಾದಲ್ಲಿ ಕಳೆದ ಕೆಲವು ದಿನಗಳಿಂದ ಕಣ್ಮರೆಯಾಗಿರುವ ಮಾಜಿ ವಿಶ್ವದ ನಂಬರ್ 1 ಆಟಗಾರ್ತಿ ಪೆಂಗ್ ಶುವಾಯ್(Peng Shuai)ಪತ್ತೆಯಾಗುವವರೆಗೂ ಚೀನಾದಲ್ಲಿ ನಡೆಯುವ ಟೂರ್ನಿಗೆ ಶೇಕಡಾ 100 ಗೈರಾಗುವ WTA ನಿರ್ಧಾರಕ್ಕೆ ವಿಶ್ವದ ನಂಬರ್ ಒನ್ ಟೆನಿಸ್ ಪ್ಲೇಯರ್ ನೊವಾಕ್ ಜೋಕೊವಿಕ್(Novak Djokovic) ಬೆಂಬಲ ಸೂಚಿಸಿದ್ದಾರೆ.
ಕೆಲವು ದಿನಗಳ ಹಿಂದೆ ಪೆಂಗ್ ಶುವಾಯ್ ಚೀನಾದ ಕಮ್ಯುನಿಸ್ಟ್ ಪಕ್ಷದ ಪೊಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ಸದಸ್ಯರಾದ ಜಾಂಗ್ ಗೌಲಿ(Zhang Gaoli) ಲೈಂಗಿಕ ಆರೋಪ(sexually assault) ಮಾಡಿದ್ದರು. ಆದರೆ ಶುವಾಯ್ ಆರೋಪಕ್ಕೆ ಅಲ್ಲಿನ ಸರ್ಕಾರ ಯಾವುದೇ ಗಮನ ನೀಡಲಿಲ್ಲ. ಇದೀಗ ಇದಕ್ಕಿದ್ದಂತೆ ಅವರು ಕಣ್ಮರೆಯಾಗಿದ್ದಾರೆ. ಅಕ್ಟೋಬರ್ 2 ರಂದು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಶುವಾಯ್ ತಿಂಗಳ ಕಳೆದರೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಕುಟುಂಬ ಕೂಟ ಶುವಾಯ್ಗಾಗಿ ಹುಡುಕಾಟ ನಡೆಸುತ್ತಲೇ ಇದೆ.
ಪೆಂಗ್ ಕಾಣೆಯಾಗಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಟೆನಿಸ್ ಅಸೋಸಿಯೇಷನ್(Women's Tennis Association). ಪೆಂಗ್ ಸುರಕ್ಷಿತವಾಗಿದ್ದಾರೆ ಎಂದು ಸಾಬೀತಾಗದಿದ್ದರೆ ತನ್ನ ಚೀನಾದ ಲಾಭದಾಯಕ ಪ್ರವಾಸದಿಂದ ಹಿಂದೆ ಸರಿಯುವ ಬೆದರಿಕೆ ಹಾಕಿತ್ತು.
ನಾವು ಪೆಂಗ್ ವಿಚಾರದಲ್ಲಿ ಯಾವುದೇ ರಾಜಿಗಳಿಗೆ ನಿಲ್ಲಲು ಸಾಧ್ಯವಿಲ್ಲ ಎಂದು WTA ಅಧ್ಯಕ್ಷ ಸ್ಟೇವ್ ಸಿಮೋನ್ ಹೇಳಿದ್ದರು. ಇದೀಗ ಪುರುಷರ ನಂಬರ್ 1 ಟೆನಿಸ್ ಆಟಗಾರ ಜೋಕೊವಿಕ್ ಕೂಡ ಬೆಂಬಲ ಸೂಚಿಸಿದ್ದಾರೆ.