ನ್ಯೂಯಾರ್ಕ್:ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಗ್ರಿಗರ್ ಡಿಮಿಟ್ರೋವ್, ಉಗೊ ಹಂಬರ್ಟ್‌ರನ್ನು ಸೋಲಿಸಿದ್ದಾರೆ.
ಬಲ್ಗೇರಿಯಾದ 29 ವರ್ಷದ ಡಿಮಿಟ್ರೋವ್ ಕಳೆದ ವರ್ಷ ಯುಎಸ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದರು. ಉಗೊ ಹಂಬರ್ಟ್ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದಾರೆ.
ನಾನು ಇಂದಿನ ಪಂದ್ಯವನ್ನಾಡಿದ್ದು ಬಿಡಿ, ಇಲ್ಲಿಗೆ ಬಂದಿರುವುದಕ್ಕೇ ಹೆಚ್ಚು ಖುಷಿಯಾಗುತ್ತಿದೆ ಎಂದು ಪಂದ್ಯ ಮುಗಿದ ನಂತರ ಡಿಮಿಟ್ರೋವ್ ಸಂತೋಷ ವ್ಯಕ್ತಪಡಿಸಿದ್ದಾರೆ. ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್ ಮತ್ತು ಯುಎಸ್ ಓಪನ್ ಎರಡಕ್ಕೂ ತಾಣವಾದ ನ್ಯೂಯಾರ್ಕ್‌ಗೆ ಆಗಮಿಸಿದ್ದೇನೆ ಎಂದಿದ್ದಾರೆ.
ನೊವಾಕ್ ಜೊಕೊವಿಕ್ ಆಯೋಜಿಸಿದ್ದ ಕ್ರೊಯೇಷಿಯಾ ಮತ್ತು ಸೆರ್ಬಿಯಾದಲ್ಲಿ ಸರಣಿಯಲ್ಲಿ ಭಾಗವಹಿಸುವಾಗ ಜೂನ್‌ನಲ್ಲಿ ಡಿಮಿಟ್ರೋವ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು.