ಕರ್ನಾಟಕ

karnataka

ETV Bharat / sports

ಕಾಳ್ಗಿಚ್ಚಿನ ಹೊಗೆಯಿಂದ ಕೈ ತಪ್ಪಿದ ಅವಕಾಶ: ಆಯೋಜಕರ ವಿರುದ್ಧ ಟೆನ್ನಿಸ್ ಆಟಗಾರ್ತಿ ಗರಂ! - ಆಯೋಜಕರ ವಿರುದ್ಧ ಟೆನ್ನಿಸ್ ಆಟಗಾರ್ತಿ ಗರಂ

ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಗಾಳ್ಗಿಚ್ಚಿನ ಹೊಗೆಯಿಂದ ಟೆನ್ನಿಸ್ ಟೂರ್ನಮೆಂಟ್​ನ ಕ್ವಾಲಿಫಯರ್​ ಪಂದ್ಯದ ಅವಕಾಶ ಕಳೆದುಕೊಂಡ ಸ್ಲೊವೇನಿಯಾದ ಟೆನ್ನಿಸ್ ಆಟಗಾರ್ತಿ, ಆಯೋಜಕರ ವಿರುದ್ಧ ಕಿಡಿಕಾರಿದ್ದಾರೆ.

Dalila Jakupovic slams Australia Open organisers,ದಲಿಲಾ ಜಕುಪೋವಿಕ್
ಆಯೋಜಕರ ವಿರುದ್ಧ ಟೆನ್ನಿಸ್ ಆಟಗಾರ್ತಿ ಗರಂ

By

Published : Jan 15, 2020, 10:28 AM IST

ಅಟ್ಲಾಂಟಾ(ಅಮೆರಿಕ): ಕಾಳ್ಗಿಚ್ಚಿನ ಹೊಗೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಮೆಂಟ್​ನ ಕ್ವಾಲಿಫಯರ್​ ಪಂದ್ಯವನ್ನ ಅರ್ಧಕ್ಕೆ ನಿಲ್ಲಿಸಿದ್ದಕ್ಕೆ ಸ್ಲೊವೇನಿಯಾದ ಆಟಗಾರ್ತಿ ದಲಿಲಾ ಜಕುಪೋವಿಕ್ ಆಯೋಜಕರ ವಿರುದ್ಧ ಕಿಡಿಕಾರಿದ್ದಾರೆ.

ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಮೆಂಟ್​ನ ಕ್ವಾಲಿಫಯರ್​ ಪಂದ್ಯದಲ್ಲಿ ದಲಿಲಾ ಜಕುಪೋವಿಕ್ ಸ್ವಿಟ್ಜರ್​ಲೆಂಡ್ ಆಟಗಾರ್ತಿ ಸ್ಟೆಫಾನಿ ವಿರುದ್ಧ 6-4, 5-6 ಅಂಕಗಳಿಂದ ಮುನ್ನಡೆ ಸಾಧಿಸಿದ್ದರು. ಆದರೆ ಹೊಗೆಯಿಂದ ಕೆಮ್ಮು ಉಂಟಾಗಿ ಕುಸಿದುಬಿದ್ದ ಜಕುಪೋವಿಕ್ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ಆಟ ಮುಂದುವರೆಸದಂತೆ ವೈದ್ಯರು ಸಲಹೆ ನೀಡಿದ್ದಾರೆ.

ಇದರಿಂದದಾಗಿ ಆಯೋಜಕರು ಜಕುಪೋವಿಕ್ ಅವರಿಗೆ ಪಂದ್ಯದಿಂದ ಹಿಂದಕ್ಕೆ ಸರಿಯುವಂತೆ ಒತ್ತಾಯಿಸಿದ್ದಾರೆ. ಅನಿವಾರ್ಯವಾಗಿ ಪಂದ್ಯದಿಂದ ಹಿಂದಕ್ಕೆ ಸರಿದ ಜಕುಪೋವಿಕ್ ಆಯೋಜಕರ ವಿರುದ್ಧ ಕಿಡಿ ಕಾರಿದ್ದಾರೆ.

ಇದು ಮಾಲಿನ್ಯವಲ್ಲ ಬೆಂಕಿಯಿಂದ ಉಂಟಾದ ಹೊಗೆ. ಮಾಲಿನ್ಯದಿಂದ ಕೂಡಿದ್ದ ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಆಡಿದ್ದೇವೆ. ಈ ಬಗ್ಗೆ ಆಯೋಜಕರಿಗೆ ಕೇಳಿದ್ದಕ್ಕೆ ವಾಯು ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದೇವೆ ಯಾವುದೇ ತೊಂದರೆ ಇಲ್ಲ ಎಂದಿದ್ದರು. ಟೂರ್ನಿಗೆ ಬಂದ ಆಟಗಾರರನ್ನ ನೋಡಿಕೊಳ್ಳುವ ರೀತಿ ಇದೇನಾ? ಎಂದು ಜಕುಪೋವಿಕ್ ಪ್ರಶ್ನಿಸಿದ್ದಾರೆ.

ಅಲ್ಲದೆ ಭಾರೀ ಹೊಗೆಯಿಂದ ಮೆಲ್ಬೋರ್ನ್​ ನಗರದಲ್ಲಿ ವಾಯು ಗುಣಮಟ್ಟ ಕಡಿಮೆ ಆಗಿದ್ದು, ಟೂರ್ನಿಗೆ ಬಂದಿರುವ ಆಟಗಾರರು ಅಭ್ಯಾಸ ಮಾದಡೆ ಹೋಟೆಲ್​​​ನಲ್ಲೆ ಉಳಿದಿದ್ದಾರೆ.

ABOUT THE AUTHOR

...view details