ಕರ್ನಾಟಕ

karnataka

ETV Bharat / sports

ಯಾರ ಮೇಲೆಯೂ ಲೈಂಗಿಕ ದೌರ್ಜನ್ಯ ಆರೋಪ ಮಾಡಿಲ್ಲ: ಪೆಂಗ್​ ಶುವಾಯ್

Chinese tennis player Peng Shuai reacts on sexual assault claims: ಚೀನಾದ ಟೆನಿಸ್​ ಆಟಗಾರ್ತಿ ಪೆಂಗ್​ ಶುವಾಯ್ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ತಾವು ಯಾರ ಮೇಲೆಯೂ ಲೈಂಗಿಕ ದೌರ್ಜನ್ಯ ಆರೋಪ ಮಾಡಿಲ್ಲ ಎಂದು ಶುವಾಯ್ ಹೇಳಿದ್ದಾರೆ.

Chinese tennis player Peng Shuai case
ಟೆನಿಸ್​ ಆಟಗಾರ್ತಿ ಪೆಂಗ್​ ಶುವಾಯ್

By

Published : Dec 20, 2021, 10:11 AM IST

ಬೀಜಿಂಗ್: ನಾನು ಯಾರ ಮೇಲೆಯೂ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಲ್ಲ ಮತ್ತು ವಿದೇಶ ಪ್ರವಾಸಕ್ಕೂ ಹೋಗುವುದಿಲ್ಲ ಎಂದು ಚೀನಾದ ಒಲಿಂಪಿಯನ್‌ ಟೆನಿಸ್​ ಆಟಗಾರ್ತಿ ಪೆಂಗ್​ ಶುವಾಯ್ ಸ್ಪಷ್ಟಪಡಿಸಿದ್ದಾರೆ. ಚೀನಾದ ಕಮ್ಯುನಿಷ್ಟ್​​ ನಾಯಕ ಜಾಂಗ್​ ಗೌಲಿ ಮೇಲೆ ಶುವಾಯ್ ಈ ಹಿಂದೆ ಗಂಭೀರ ಆರೋಪ ಮಾಡಿದ್ದರು.

ಮೊದಲನೆಯದಾಗಿ, ಈ ಒಂದು ಪ್ರಮುಖ ವಿಷಯದ ಬಗ್ಗೆ ಒತ್ತಿಹೇಳುವುದು ಮುಖ್ಯವಾಗಿದೆ. ಯಾರೊಬ್ಬರೂ ನನ್ನ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ನಾನು ಎಂದೂ ಕೂಡ ಹೇಳಿಲ್ಲ ಅಥವಾ ಬರೆದಿಲ್ಲ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪೆಂಗ್ ಹೇಳಿದ್ದಾರೆ.

ವೈಬೊ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಯಿಂದ ಡಿಲಿಟ್​​ ಮಾಡಲಾದ ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತಾದ ಪೋಸ್ಟ್​ ಬಗ್ಗೆ ಅವರು ಸ್ಪಷ್ಟನೆ ನೀಡಿದರು. ಅದು ನನ್ನ 'ವೈಯಕ್ತಿಕ ವಿಚಾರ', ಈ ಬಗ್ಗೆ ತಪ್ಪಾಗಿ ಅರ್ಥೈಸಲಾಗಿದೆ. ಕೋವಿಡ್-19​ ಹಿನ್ನೆಲೆಯಲ್ಲಿ ತಾವು ಎಲ್ಲಿಗೂ ತೆರಳದೆ ಬೀಜಿಂಗ್‌ನಲ್ಲೇ ವಾಸಿಸುತ್ತಿದ್ದು, ವಿದೇಶ ಪ್ರಯಾಣದ ಬಗ್ಗೆಯೂ ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:Sexual Assault Row : ಚೀನಾದ ಟೆನಿಸ್ ತಾರೆ ಪೆಂಗ್ ಶುವಾಯ್ ಪ್ರತ್ಯಕ್ಷ

ಜಾಂಗ್ ಗೌಲಿ ವಿರುದ್ಧ ಶುವಾಯ್ ಲೈಂಗಿಕ ದೌರ್ಜನ್ಯ ಆರೋಪ ಸುದ್ದಿ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿತ್ತು. ಚೀನಾದ 'ಮಿ ಟೂ' ಭಾಗವಾಗಿ ಬೆಳಕಿಗೆ ಬಂದ ಈ ಪ್ರಕರಣದ ಬಗ್ಗೆ ಭಾರಿ ಗೌಪ್ಯತೆ ಕಾಪಾಡಿಕೊಂಡು ಬರಲಾಗುತ್ತಿದೆ.

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕೆಲ ದಿನಗಳವರೆಗೆ ಪೆಂಗ್​ ಶುವಾಯ್ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ಕೆಲದಿನಗಳ ಹಿಂದೆ ಅವರೊಂದಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮುಖ್ಯಸ್ಥರು ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ:ಸುರಕ್ಷಿತವಾಗಿರುವುದಾಗಿ IOCಗೆ ದೃಢಪಡಿಸಿದ ಚೀನಾ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್​

ABOUT THE AUTHOR

...view details