ಕರ್ನಾಟಕ

karnataka

ETV Bharat / sports

ಅಡಿಲೇಡ್‌ ಟೆನಿಸ್​ ಟೂರ್ನಮೆಂಟ್ ​: ಸೆಮಿಫೈನಲ್​ಗೆ ಬೋಪಣ್ಣ-ರಾಮ್‌ಕುಮಾರ್‌ ಜೋಡಿ ಲಗ್ಗೆ - ಅಡಿಲೇಡ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಮೆಂಟ್‌

ಅಡಿಲೇಡ್ ಈವೆಂಟ್ ಆಸ್ಟ್ರೇಲಿಯನ್ ಓಪನ್‌ಗಾಗಿ ಟ್ಯೂನ್ ಅಪ್ ಪಂದ್ಯಾವಳಿಯಾಗಿದ್ದು, ಜನವರಿ 17ರಂದು ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯನ್ ಓಪನ್‌ ಪ್ರಾರಂಭವಾಗುತ್ತದೆ. ಅಡಿಲೇಡ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಭಾರತೀಯರು ಜೋಡಿಯಾಗಿದ್ದಾರೆ..

Bopanna-Ramkumar
ಬೋಪಣ್ಣ-ರಾಮ್‌ಕುಮಾರ್‌

By

Published : Jan 7, 2022, 1:56 PM IST

ಅಡಿಲೇಡ್‌(ಆಸ್ಟ್ರೇಲಿಯಾ) :ಇಲ್ಲಿ ನಡೆಯುತ್ತಿರುವ ಅಡಿಲೇಡ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರಾಮ್‌ಕುಮಾರ್ ರಾಮನಾಥನ್ ಜೋಡಿ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ.

ಪುರುಷರ ಈವೆಂಟ್‌ನ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಫ್ರೆಂಚ್-ಮೊನೆಗಾಸ್ಕ್​​ನ ಬೆಂಜಮಿನ್ ಬೊಂಜಿ ಮತ್ತು ಹ್ಯೂಗೊ ನೈಸ್ ಜೋಡಿಯನ್ನು ಬೋಪಣ್ಣ ಮತ್ತು ರಾಮ್‌ಕುಮಾರ್ 6-1 6-3 ಸೆಟ್‌ಗಳಿಂದ ಮಣಿಸಿ, ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸೆಮಿಫೈನಲ್​ನಲ್ಲಿ ಬೋಸ್ನಿಯಾ-ಮೆಕ್ಸಿಕನ್​​ ಜೋಡಿಯಾದ ಟೊಮಿಸ್ಲಾವ್ ಬ್ರಿಕ್ ಮತ್ತು ಸ್ಯಾಂಟಿಯಾಗೊ ಗೊನ್ಜಾಲೆಜ್ ಅವರೊಂದಿಗೆ ಬೋಪಣ್ಣ ಮತ್ತು ರಾಮ್‌ಕುಮಾರ್ ಸೆಣೆಸಾಡಬೇಕಿದೆ.

ಇದನ್ನೂ ಓದಿ: ಜೋಹಾನ್ಸ್​ಬರ್ಗ್ ಸೋಲಿನ ಬಳಿಕ ಮುಂದಿನ ಟೆಸ್ಟ್​​ ಗೆಲ್ಲಲೇಬೇಕೆಂಬ ಹಸಿವು ಇನ್ನೂ ಹೆಚ್ಚಾಗಿದೆ: ರಾಹುಲ್​​

ಅಡಿಲೇಡ್ ಈವೆಂಟ್ ಆಸ್ಟ್ರೇಲಿಯನ್ ಓಪನ್‌ಗಾಗಿ ಟ್ಯೂನ್ ಅಪ್ ಪಂದ್ಯಾವಳಿಯಾಗಿದ್ದು, ಜನವರಿ 17ರಂದು ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯನ್ ಓಪನ್‌ ಪ್ರಾರಂಭವಾಗುತ್ತದೆ. ಅಡಿಲೇಡ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಭಾರತೀಯರು ಜೋಡಿಯಾಗಿದ್ದಾರೆ.

ಇಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿದರೆ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಡೆನ್ಮಾರ್ಕ್ ವಿರುದ್ಧದ ಭಾರತದ 'ಡೇವಿಸ್ ಕಪ್' ಪಂದ್ಯದಲ್ಲಿ ಇಬ್ಬರೂ ಜೊತೆಯಾಗಬಹುದಾಗಿದೆ.

For All Latest Updates

TAGGED:

ABOUT THE AUTHOR

...view details