ಕರ್ನಾಟಕ

karnataka

ETV Bharat / sports

ಜ್ವರೆವ್​ ವಿರುದ್ಧ ರೋಚಕ ಜಯ ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದ ಚಾಂಪಿಯನ್ ಜೊಕೊವಿಕ್​ - ಅಲೆಕ್ಸಾಂಡರ್​ ಜ್ವರೆವ್​

ಮೆಲ್ಬೋರ್ನ್​ನ ರೋಡ್​ ಲೇವರ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ 22 ವರ್ಷದ ಜ್ವರೆವ್ ವಿರುದ್ಧ ​ ಹಾಲಿ ಚಾಂಪಿಯನ್ ಜೊಕೊವಿಕ್​ 6(8), 6-2, 6-4, 7(8)-6(6) ರಲ್ಲಿ ಮಣಿಸಿದರು.

Australian Open
ಸೆಮಿಫೈನಲ್ ಪ್ರವೇಶಿಸಿದ ನೊವಾಕ್ ಜೋಕೊವಿಕ್

By

Published : Feb 16, 2021, 7:55 PM IST

Updated : Feb 16, 2021, 8:40 PM IST

ಮೆಲ್ಬೋರ್ನ್​: ವಿಶ್ವದ ನಂಬರ್​​ ಒನ್ ಆಟಗಾರ ನೊವಾಕ್ ಜೊಕೊವಿಕ್​​ ಮಂಗಳವಾರ ನಡೆದ ಕ್ವಾರ್ಟರ್​ ಫೈನಲ್​ ರೋಚಕ ಕದನದಲ್ಲಿ ಜರ್ಮನಿಯ ಅಲೆಕ್ಸಾಂಡರ್​ ಜ್ವರೆವ್​ ವಿರುದ್ಧ ಗೆಲುವು ಸಾಧಿಸಿ ಆಸ್ಟ್ರೇಲಿಯನ್ ಓಪನ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮೆಲ್ಬೋರ್ನ್​ನ ರೋಡ್​ ಲೇವರ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ 22 ವರ್ಷದ ಜ್ವರೆವ್ ವಿರುದ್ಧ ​ ಹಾಲಿ ಚಾಂಪಿಯನ್ ಜೊಕೊವಿಕ್​​ 6(8), 6-2, 6-4, 7(8)-6(6) ರಲ್ಲಿ ಮಣಿಸಿದರು.

8 ಬಾರಿಯ ಚಾಂಪಿಯನ್ ನೊವಾಕ್ ಮೊದಲ ಸೆಟ್​ನಲ್ಲಿ ಯುವ ಆಟಗಾರನಿಗೆ ಪ್ರಬಲ ಪೈಪೋಟಿ ನೀಡಿದರೂ ಟೈ ಬ್ರೇಕರ್​ನಲ್ಲಿ ಸೋಲುಂಡರು. ಆದರೆ, 2 ಮತ್ತು 3ನೇ ಸೆಟ್​​ನಲ್ಲಿ ಸುಲಭ ಜಯ ಸಾಧಿಸಿದರೆ 4ನೇ ಸೆಟ್​ನಲ್ಲಿ ಜ್ವರೆವ್​ ಮತ್ತೆ ಪ್ರಬಲ ಪೈಪೋಟಿ ನೀಡಿದರು. ಆದರೆ ಟೈ ಬ್ರೇಕರ್​ನಲ್ಲಿ 6-8ರಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದರು.

ಸರ್ಬಿಯನ್ ಸ್ಟಾರ್ ಸೆಮಿಫೈನಲ್​ ಪಂದ್ಯದಲ್ಲಿ ಸರ್​ಪ್ರೈಸ್​ ಸ್ಟಾರ್​ ಆಗಿ ಸೆಮಿಫೈನಲ್ ಪ್ರವೇಶಿಸಿರುವ ರಷ್ಯಾದ ಅಸ್ಲಾನ್​ ಕರಾತ್ಸೆವ್​ ವಿರುದ್ಧ ಸೆಣಸಾಡಲಿದ್ದಾರೆ. ಅರ್ಹತಾ ಸುತ್ತಿನ ಮೂಲಕ ಟೂರ್ನಿಗೆ ಪ್ರವೇಶ ಪಡೆದಿದ್ದ ಅಸ್ಲಾನ್​ ಅದ್ಭುತ ಪ್ರದರ್ಶನ ತೋರಿ ಸೆಮಿಫೈನಲ್​ವರೆಗೆ ಬಂದಿದ್ದಾರೆ. ಅವರು ಓಪನ್​ ಎರಾದಲ್ಲಿ ಪದಾರ್ಪಣೆ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಟೆನ್ನಿಸ್ ಪ್ಲೇಯರ್ ಎನಿಸಿಕೊಂಡಿದ್ದಾರೆ.

ಇದನ್ನು ಓದಿ:ಆಸ್ಟ್ರೇಲಿಯಾ ಓಪನ್​: ದ್ವಿತೀಯ ಶ್ರೇಯಾಂಕದ ಹಾಲೆಪ್​ ವಿರುದ್ಧ ಗೆದ್ದು ಸೆಮಿಫೈನಲ್​ಗೆ ಎಂಟ್ರಿ ಕೊಟ್ಟ ಸೆರೆನಾ

Last Updated : Feb 16, 2021, 8:40 PM IST

ABOUT THE AUTHOR

...view details