ಮೆಲ್ಬೋರ್ನ್: ಅಮೆರಿಕದ 22ನೇ ಶ್ರೇಯಾಂಕದ ಜನ್ನಿಫರ್ ಬ್ರಾಡಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ಅವರನ್ನು ಮಣಿಸಿ ವೃತ್ತಿ ಜೀವನದ ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ಪ್ರವೇಶಿಸಿದ್ದಾರೆ.
ಬ್ರಾಡಿ ಗುರುವಾರ ರಾಡ್ಲೇವರ್ ಅರೆನಾದಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಮುಚೋವಾ ವಿರುದ್ಧ 6-4, 3-6, 6-4 ರಲ್ಲಿ ಮಣಿಸಿ ಮೊದಲ ಬಾರಿಗೆ ಫೈನಲ್ ಫೈನಲ್ ಪ್ರವೇಶಿಸಿದರು.
25ನೇ ಶ್ರೇಯಾಂಕದ ಮುಚೋವಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ್ತಿ ಆಶ್ಲೇ ಬಾರ್ಟಿ ವಿರುದ್ಧ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದರು. ಆದರೆ, ಸೆಮಿಫೈನಲ್ನಲ್ಲಿ 25 ವರ್ಷ ವರ್ಷದ ಅಮೆರಿಕನ್ ಆಟಗಾರ್ತಿ ಎದುರು ಉತ್ತಮ ಪೈಪೋಟಿಯ ಹೊರತಾಗಿಯೂ ಸೋಲು ಕಂಡರು.
ಬ್ರಾಡಿ 2020ರ ಯುಎಸ್ ಓಪನ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ವೃತ್ತಿ ಜೀವನದ ಅತ್ಯಂತ ಶ್ರೇಷ್ಠ ಪ್ರದರ್ಶನವಾಗಿತ್ತು. ಇದೀಗ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ. ಇವರು ಫೈನಲ್ ಪಂದ್ಯದಲ್ಲಿ ಸೆರೆನಾರನ್ನು ಮಣಿಸಿ ಫೈನಲ್ಗೆ ಎಂಟ್ರಿಕೊಟ್ಟಿರುವ ಜಪಾನ್ನ ನವೋಮಿ ಒಸಾಕ ಅವರನ್ನು ಎದುರಿಸಲಿದ್ದಾರೆ.
24ನೇ ಗ್ರ್ಯಾಂಡ್ಸ್ಲಾಮ್ ಮೇಲೆ ಕಣ್ಣಿಟ್ಟಿದ್ದ ಅಮೆರಿಕದ ಸೆರೆನಾ ವಿಲಿಯಮ್ಸ್ ವಿರುದ್ಧ ಒಸಾಕ 6-3, 6-4ರಲ್ಲಿ ಗೆಲುವು ಸಾಧಿಸಿದ್ದರು.