ಮೆಲ್ಬೋರ್ನ್:ಆಸ್ಟ್ರೇಲಿಯನ್ ಓಪನ್ಗೆ ಮತ್ತೊಂದು ಕಂಟಕ ಎದುರಾಗಿದೆ. ಲಾಸ್ ಏಂಜಲೀಸ್‌ನಿಂದ ಚಾರ್ಟರ್ ಫ್ಲೈಟ್ ನಲ್ಲಿ ಮೆಲ್ಬೋರ್ನ್‌ಗೆ ಬಂದಿಳಿದ ಟೆನಿಸ್ ಆಟಗಾರರು ಮತ್ತು ಅಧಿಕಾರಿಗಳ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮುಂಜಾಗ್ರತ ಕ್ರಮವಾಗಿ ಎಲ್ಲಾ ಆಟಗಾರರು ಮತ್ತು ಅಧಿಕಾರಿಗಳನ್ನು 14 ದಿನಗಳ ಕಾಲ ಕ್ವಾರಂಟೈನ್ಲ್ಲಿರುವಂತೆ ಸೂಚಿಸಲಾಗಿದೆ. ಆಟಗಾರರು ದಿನಕ್ಕೆ ಐದು ಗಂಟೆಗಳ ಕಾಲ ಒಳಾಂಗಣ ಕ್ರಿಡಾಂಗಣದಲ್ಲಿ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಎಟಿಪಿ ಕಪ್ ಫೆಬ್ರವರಿ 1 ರಿಂದ 5 ರವರೆಗೆ ನಡೆಯಲಿದ್ದು, 12 ದೇಶಗಳ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಅದೇ ಸಮಯದಲ್ಲಿ, ಜನವರಿ 31 ರಿಂದ ಫೆಬ್ರವರಿ 6 ರವರೆಗೆ ನಡೆಯಲಿರುವ ಎರಡು ಡಬ್ಲ್ಯುಟಿಎ ಪಂದ್ಯಾವಳಿಗಳು ಮತ್ತು ಎರಡು ಎಟಿಪಿ 250 ಪಂದ್ಯಾವಳಿಗಳಲ್ಲಿ 64 ಸಿಂಗಲ್ಸ್ ಆಟಗಾರರು ಮತ್ತು 32 ಡಬಲ್ಸ್ ಆಟಗಾರರು ಭಾಗವಹಿಸಲಿದ್ದಾರೆ.
ಓದಿ : ಪೆವಿಲಿಯನ್ ಸೇರಿದ ಗಿಲ್, ರೋಹಿತ್ ಶರ್ಮಾ: ಮೂರನೇ ಸೆಷನ್ಗೆ ವರುಣ ಅಡ್ಡಿ
ಮತ್ತೊಂದೆಡೆ ಡಬ್ಲ್ಯೂಟಿಎ 250 ಪಂದ್ಯಾವಳಿ ಫೆಬ್ರವರಿ 13 ರಿಂದ 19 ರವರೆಗೆ ನಡೆಯಲಿದ್ದು, ಫೆಬ್ರವರಿ 8 ರಿಂದ 21 ರವರೆಗೆ ಆಸ್ಟ್ರೇಲಿಯನ್ ಓಪನ್ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆಯಲಿದೆ.