ಮೆಲ್ಬೋರ್ನ್:ಅಮೆರಿಕದ ಉದಯೋನ್ಮುಖ ಟೆನ್ನಿಸ್ ಆಟಗಾರ್ತಿ ಕೊಕೊ ಗೌಫ್ ಆಸ್ಟ್ರೇಲಿಯಾ ಓಪನ್ನಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವದ 4ನೇ ಶ್ರೇಯಾಂಕ ಹೊಂದಿರುವ ಜಪಾನ್ನ ನವೋಮಿ ಒಸಾಕ ಅವರನ್ನು ನೇರ ಸೆಟ್ಗಳ ಅಂತರದಿಂದ ಮಣಿಸುವ ಮೂಲಕ ಟೆನ್ನಿಸ್ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದ್ದಾರೆ.
ವಿಲಿಯಮ್ಸ್ ಸಹೋದರಿಯರ ಹಾದಿಯಲ್ಲಿರುವ ಅಮೆರಿಕದ 15 ವರ್ಷದ ಗೌಫ್ ತಮ್ಮ ಮೊದಲ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ವೀನಸ್ ವಿಲಿಯಮ್ಸ್ಗೆ ಆಘಾತ ನೀಡಿದ್ದರು. ಆಸ್ಟ್ರೇಲಿಯಾ ಓಪನ್ನ ಮೊದಲ ಸುತ್ತಿನಲ್ಲಿ ಮತ್ತೆ ವೀನಸ್ರನ್ನು ಮಣಿಸಿದ್ದ ಗೌಫ್ ಮೂರನೇ ಸುತ್ತಿನ ಪಂದ್ಯದಲ್ಲಿ 22 ವರ್ಷದ 2 ಗ್ರಾಂಡ್ಸ್ಲಾಮ್ ವಿನ್ನರ್ ಒಸಾಕರನ್ನು 6-3, 6-4ರ ಅಂತರದಲ್ಲಿ ಮಣಿಸಿ ನಾಲ್ಕನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.