ಸಿಡ್ನಿ: ವರ್ಷದ ಮೊದಲ ಗ್ರ್ಯಾಂಡ್ಸ್ಲಾಮ್ ಆಗಿರುವ ಆಸ್ಟ್ರೇಲಿಯಾ ಓಪನ್ ಫೆಬ್ರವರಿ 8 ರಿಂದ 21 ರವರೆಗೆ ನಡೆಯಲಿದ್ದು, ನಿಗದಿತ ಸಮಯಕ್ಕಿಂತ ಮೂರು ವಾರಗಳ ನಂತರ ಟೂರ್ನಿ ನಡೆಯಲಿದೆ ಎಂದು ಅಸೋಸಿಯೇಷನ್ ಆಫ್ ಟೆನಿಸ್ ಪ್ರೊಫೆಷನಲ್ಸ್(ಎಟಿಪಿ) ಹೇಳಿದೆ.
ಆಸ್ಟ್ರೇಲಿಯಾ ಓಪನ್ ಅನ್ನು ಜನವರಿ 18 ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ -19 ನಿರ್ಬಂಧಗಳಿಂದಾಗಿ ವೇಳಾಪಟ್ಟಿಯನ್ನು ನವೀಕರಿಸಲಾಗಿದೆ.
ಜನವರಿ 10 ರಿಂದ 13ರ ವರೆಗೆ ಸ್ಟ್ರೇಲಿಯಾದ ಓಪನ್‌ಗೆ ಪುರುಷರ ಅರ್ಹತಾ ಪಂದ್ಯಗಳು ನಡೆಯಲಿದ್ದು, ಅದಕ್ಕೂ ಮೊದಲು ಆಟಗಾರರು 14 ದಿನಗಳ ಕ್ವಾರಂಟೈನ್ ನಿಯಮ ಪಾಲಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದೆ.
ಕ್ವಾರಂಟೈನ್ ಅವಧಿಯಲ್ಲಿ ಆಟಗಾರರಿಗೆ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ 12 ತಂಡಗಳ ಎಟಿಪಿ ಕಪ್‌ಗೆ ಮುಂಚಿತವಾಗಿ ತಯಾರಾಗಲು ಅನುವು ಮಾಡಿಕೊಡಲಾಗುತ್ತದೆ. ಫೆಬ್ರವರಿ 8 ರಿಂದ ಆಸ್ಟ್ರೇಲಿಯನ್ ಓಪನ್ ಪ್ರಾರಂಭವಾಗುವ ಮೊದಲು ಫೆಬ್ರವರಿ 1 ರಿಂದ 5 ರವರೆಗೆ ಪುರುಷರ ಎಟಿಪಿ ಕಪ್ ಪಂದ್ಯಾವಳಿಯ ಸಂಕ್ಷಿಪ್ತ ಆವೃತ್ತಿಯು ಮೆಲ್ಬೋರ್ನ್‌ನಲ್ಲಿ ನಡೆಯಲಿದೆ ಎಂದು ಎಟಿಪಿ ಹೇಳಿದೆ.