ವಾಷಿಂಗ್ಟನ್ :ವಿಶ್ವ ಟೆನಿಸ್ನ ನಂಬರ್ 1 ಆಟಗಾರ್ತಿ ಆಶ್ಲೆ ಬಾರ್ಟಿ ಮಿಯಾಮಿ ಓಪನ್ನಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಆಸ್ಟ್ರೇಲಿಯಾದ ಸ್ಟಾರ್ 7ನೇ ಶ್ರೇಯಾಂಕದ ಬೆಲರೂಸ್ನ ಅರಿನಾ ಸಬಲೆಂಕಾ ವಿರುದ್ಧ 6-4, 6-7, 6-3ರ ಸೆಟ್ಗಳ ಅಂತರದಲ್ಲಿ ಸೋಲಿಸುವ ಮೂಲಕ ಮಿಯಾಮಿ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಬಾರ್ಟಿಗೆ ನಂಬರ್ 1 ಸ್ಥಾನ ಉಳಿಸಿಕೊಳ್ಳಲು ಇನ್ನೊಂದು ಜಯದ ಅವಶ್ಯಕತೆಯಿದೆ.
ಬಾರ್ಟಿ ಸೆಮಿಫೈನಲ್ನಲ್ಲಿ ಉಕ್ರೇನ್ ಎಲಿನಾ ಸ್ವಿಟೋಲಿನಾ ಅವರನ್ನು ಎದುರಿಸಲಿದ್ದಾರೆ. ಸ್ವಿಟೋಲಿನಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲುಥುವೇನಿಯಾದ ಅನಸ್ತೇಸಿಜಾ ಸೆವಾಸ್ಟೋವಾ ವಿರುದ್ಧ 6-3,6-2ರ ನೇರ ಸೆಟ್ಗಳ ಅಂತರದಲ್ಲಿ ಗೆದ್ದು ಸೆಮಿಫೈನಲ್ಗೆ ಎಂಟ್ರಿಕೊಟ್ಟಿದ್ದಾರೆ.
ಮತ್ತೊಂದು ಕ್ವಾರ್ಟರ್ ಫೈನಲ್ನಲ್ಲಿ ಇಂದು ನವೋಮಿ ಒಸಾಕ ಗ್ರೀಸ್ನ ಮರಿಯಾ ಸಕ್ಕರಿಯನ್ನು ಕೆನಾಡದ ಬಿಯಾಂಕಾ ಆಂಡ್ರೆಸ್ಕು ಸ್ಪೇನಿನ ಸಾರಾ ಸಾರೀಬ್ಸ್ ಸವಾಲನ್ನು ಎದುರಿಸಲಿದ್ದಾರೆ.
ಇದನ್ನು ಓದಿ:ಅನ್ಸೋಲ್ಡ್ ಜೇಸನ್ ರಾಯ್ಗೆ ಅದೃಷ್ಟ! ಬದಲಿ ಆಟಗಾರನಾಗಿ SRH ಸೇರಿದ ಇಂಗ್ಲೆಂಡ್ ಓಪನರ್