ಮೆಲ್ಬೋರ್ನ್(ಆಸ್ಟ್ರೇಲಿಯಾ) : ಮೆಲ್ಬೋರ್ನ್‌ನಲ್ಲಿ ನಡೆದ ಫಿಲಿಪ್ ಐಲ್ಯಾಂಡ್ ಟ್ರೋಫಿ ಡಬ್ಲ್ಯುಟಿಎ 250 ಟೆನಿಸ್ ಪಂದ್ಯಾವಳಿಯ ಡಬಲ್ಸ್ ವಿಭಾಗದಲ್ಲಿ ಭಾರತದ ಅಂಕಿತಾ ರೈನಾ ಮತ್ತು ರಷ್ಯಾದ ಕಮಿಲ್ಲಾ ರಾಖಿಮೋವಾ ಜೋಡಿ ತಮ್ಮ ಮೊದಲನೇಯ ಡಬ್ಲ್ಯೂಟಿಎ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಜೋಡಿ ರಷ್ಯಾದ ಅನ್ನಾ ಬ್ಲಿಂಕೋವಾ ಮತ್ತು ಅನಸ್ತಾಸಿಯಾ ಪೊಟಪೋವಾ ಅವರನ್ನ ಮಣಿಸಿ ಈ ಪ್ರಶಸ್ತಿಯನ್ನ ಗೆದ್ದುಕೊಂಡಿತು.
ಫೈನಲ್‌ನಲ್ಲಿ ಅಂಕಿತಾ - ಕಮಿಲ್ಲಾ ಜೋಡಿ ರಷ್ಯಾದ ಅನ್ನಾ ಬ್ಲಿಂಕೋವಾ ಮತ್ತು ಅನಸ್ತಾಸಿಯಾ ಪೊಟಪೋವಾ ಅವರನ್ನು 2-6, 6-4, 10-7 ಸೆಟ್‌ಗಳಿಂದ ಸೋಲಿಸಿ ಈ ಪ್ರಶಸ್ತಿಗೆ ಭಾಜನವಾಯ್ತು.