ದುಬೈ:ಭಾರತದ ಅಗ್ರ ಶ್ರೇಯಾಂಕಿತ ಸಿಂಗಲ್ಸ್ ಮತ್ತು ಡಬಲ್ಸ್ ಟೆನ್ನಿಸ್ ಆಟಗಾರ್ತಿ ಅಂಕಿತಾ ರೈನಾ, ಜಾರ್ಜಿಯಾದ ಎಕಟೆರಿನ್ ಗೋರ್ಗೊಡ್ಜ್ ಜೊತೆಗೂಡಿ ಅಲ್ ಹಬ್ಟೂರ್ ಟೆನ್ನಿಸ್ ಚಾಲೆಂಜ್‌ನಲ್ಲಿ ಡಬಲ್ಸ್ ಕಿರೀಟ ಗೆದ್ದು ಸಂಭ್ರಮಿಸಿದ್ದಾರೆ.
ಶನಿವಾರ ಹ್ಯಾಬ್ಟೂರ್ ಗ್ರ್ಯಾಂಡ್ ಬೀಚ್ ರೆಸಾರ್ಟ್ ಮತ್ತು ಸ್ಪಾದಲ್ಲಿ ನಡೆದ ಫೈನಲ್‌ನಲ್ಲಿ ಅಂಕಿತಾ ರೈನಾ ಮತ್ತು ಗೋರ್ಗೊಡ್ಜ್ 6-4, 3-6, 10-6ರಿಂದ ಬೊಲ್ಸೊವಾ ಮತ್ತು ಜುವಾನ್ ಅವರನ್ನು ಮಣಿಸಿ ಡಬಲ್ಸ್ ಪ್ರಶಸ್ತಿಗೆ ಮುತ್ತಿಕ್ಕಿದರು.