ಕರ್ನಾಟಕ

karnataka

ETV Bharat / sports

US Open ಡಬಲ್ಸ್​: ಮೊದಲ ಸುತ್ತಿನಲ್ಲೇ ಹೊರಬಿದ್ದ ಅಂಕಿತಾ, ದಿವಿಜ್ ಶರಣ್ - ಅಂಕಿತಾ ರೈನಾ ಮಹಿಳೆರ ಡಬಲ್ಸ್​ನಲ್ಲಿಸೋಲು

ಗುರುವಾರ ನಡೆದ ಮಹಿಳೆಯರ ಡಬಲ್ಸ್​ನಲ್ಲಿ ಅಂಕಿತಾ ಮತ್ತು ಉಕ್ರೇನ್​ ಜೊತಗಾರ್ತಿ ಕ್ಯಾಥರಿನಾ ಬಾಂಡೆರಿಯಂಕೊ ಜೋಡಿ 8ನೇ ಶ್ರೇಯಾಂಕದ ಆ್ಯಂಡ್ರೇಜಾ ಕ್ಲೆಪಾಕ್​ ಮತ್ತು ಡಾರೀಜ ಜುರಾಕ್ ಜೋಡಿ ವಿರುದ್ಧ 1-6, 1-6 ರ ನೇರ ಸೆಟ್​ಗಳಲ್ಲಿ ಸೋಲು ಕಂಡರು.

US Open
ಯುಎಸ್​ ಓಪನ್​

By

Published : Sep 2, 2021, 9:04 AM IST

ನ್ಯೂಯಾರ್ಕ್: ಯುಎಸ್​ ಓಪನ್​ನಲ್ಲಿ ಭಾರತದ ಅಂಕಿತಾ ರೈನಾ ಮಹಿಳೆರ ಡಬಲ್ಸ್​ನಲ್ಲಿ ಮತ್ತು ದಿವಿಜ್ ಶರಣ್ ಪುರುಷರ ಡಬಲ್ಸ್​ನಲ್ಲಿ ಮೊದಲ ಸುತ್ತಿನಲ್ಲೇ ಸೋಲು ಕಂಡು ನಿರಾಸೆ ಅನುಭವಿಸಿದ್ದಾರೆ.

ಗುರುವಾರ ನಡೆದ ಮಹಿಳೆಯರ ಡಬಲ್ಸ್​ನಲ್ಲಿ ಅಂಕಿತಾ ಮತ್ತು ಉಕ್ರೇನ್​ ಜೊತಗಾರ್ತಿ ಕ್ಯಾಥರಿನಾ ಬಾಂಡೆರಿಯಂಕೊ ಜೋಡಿ 8ನೇ ಶ್ರೇಯಾಂಕದ ಆ್ಯಂಡ್ರೇಜಾ ಕ್ಲೆಪಾಕ್​ ಮತ್ತು ಡಾರೀಜ ಜುರಾಕ್ ಜೋಡಿ ವಿರುದ್ಧ 1-6, 1-6 ರ ನೇರ ಸೆಟ್​ಗಳಲ್ಲಿ ಸೋಲು ಕಂಡರು.

ಪುರುಷರ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಕ್ವಾನ್ ಸೂನ್-ವೂ ಜೊತೆಗೂಡಿ ಕಣಕ್ಕಿಳಿದಿದ್ದ ದಿವಿಜ್ ಶರಣ್​ ಅಮೆರಿಕ- ಇಂಗ್ಲೆಂಡ್ ಜೋಡಿಯಾದ ರಾಜೀವ್ ರಾಮ್​​ ಮತ್ತು ಜೋ ಸ್ಯಾಲಿಸ್​ಬರಿ ವಿರುದ್ಧ 3-6,4-6 ರಲ್ಲಿ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿದರು.

ಸಿಂಗಲ್ಸ್​ನಲ್ಲಿ ಯುಎಸ್​ ಓಪನ್​ಗೆ ಭಾರತದಿಂದ ಯಾರೊಬ್ಬರು ಅರ್ಹತೆ ಪಡೆದುಕೊಂಡಿಲ್ಲ. ಇನ್ನು ಮಹಿಳೆಯ ಡಬಲ್ಸ್​ ವಿಭಾಗದಲ್ಲಿ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಮೊದಲ ಸುತ್ತಿನ ಪಂದ್ಯವನ್ನು ಶುಕ್ರವಾರ ಅಮೆರಿಕದ ಕೊಕೊ ವಾಂಡೆವೇಗ್ ಜೊತೆಗೂಡಿ 12 ಶ್ರೇಯಾಂಕದ ಜೋಡಿ ನಡಿಯಾ ಕಿಚೆನಾಕ್ ಮತ್ತು ರಾಲುಕ ಒಲರು ವಿರುದ್ಧ ಸೆಣಸಾಡಲಿದ್ದಾರೆ. ಪುರಷರ ವಿಭಾಗದಲ್ಲಿ ರೋಹನ್ ಬೋಪಣ್ಣ ಕೂಡ ಸ್ಪರ್ಧೆಯಲ್ಲಿದ್ದಾರೆ. ಅವರ ಪಂದ್ಯ ಮುಂದೂಡಲ್ಪಟ್ಟಿದೆ.

ಇದನ್ನು ಓದಿ:4ನೇ ಟೆಸ್ಟ್​: ಹೀನಾಯ ಸೋಲು ಮರೆತು ತಿರುಗಿ ಬೀಳುವ ಉತ್ಸಾಹದಲ್ಲಿ ಭಾರತ, ಅಶ್ವಿನ್ ಆಟ ನಿರೀಕ್ಷೆ

ABOUT THE AUTHOR

...view details