ಮೆಲ್ಬೋರ್ನ್: ಆಸ್ಟ್ರೇಲಿಯಾ ಓಪನ್ನ ಕ್ವಾಲಿಫೈಯರ್ನಲ್ಲಿ ಭಾರತ ತಂಡದ ಮಹಿಳಾ ವಿಭಾಗದ ಅಗ್ರ ಶ್ರೇಯಾಂಕದ ಆಟಗಾರ್ತಿ ಅಂಕಿತಾ ರೈನಾ ಫೈನಲ್ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಅಂಕಿತಾ ಇಂದು ದುಬೈನಲ್ಲಿ ನಡೆದ 2ನೇ ಸುತ್ತಿನ ಪಂದ್ಯದಲ್ಲಿ 6-1,2-6, 6-3ರ ಮೂರು ಸೆಟ್ಗಳ ಪಂದ್ಯದಲ್ಲಿ ಉಕ್ರೇನ್ನ 118ರ ಶ್ರೇಯಾಂಕದ ಕತ್ರಿನಾ ಜವಾತ್ಸಕಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಂತಿಮ ಹಂತಕ್ಕೆ ಪ್ರವೇಶಿಸಿದ್ದಾರೆ.
ಎರಡು ಗಂಟೆ 20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅಂಕಿತಾ ಪ್ರಬಲ ಹೋರಾಟದ ನಡುವೆ ಗೆಲುವು ಪಡೆಯುವಲ್ಲಿ ಯಶಸ್ವಿಯಾಗಿದ್ದು, ತಮ್ಮ ಚೊಚ್ಚಲ ಗ್ರ್ಯಾಂಡ್ಸ್ಲಾಮ್ಗೆ ಅರ್ಹತೆ ಪಡೆಯಲು ಕೇವಲ ಒಂದು ಗೆಲುವಿನ ಅವಶ್ಯಕತೆಯಿದೆ.