ಕರ್ನಾಟಕ

karnataka

ETV Bharat / sports

ಎರಡು ತಿಂಗಳ ನಂತರ ಮೊದಲ ಗೆಲುವು ದಾಖಲಿಸಿದ ಆ್ಯಂಡಿ ಮರ್ರೆ - ಆ್ಯಂಡಿ ಮರ್ರೆ ಲೇಟೆಸ್ಟ್ ನ್ಯೂಸ್

ಬ್ರಿಟ್ಸ್ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯದಲ್ಲಿ ಬ್ರಿಟಿಷ್ ನಂಬರ್ ಒನ್ ಆಟಗಾರ ಇವಾನ್ಸ್ ಅವರನ್ನು 7-6 (7-5), 6-4 ರಿಂದ ಸೋಲಿಸಿದರು.

Andy Murray grabs his first win in two months
ಆ್ಯಂಡಿ ಮರ್ರೆ

By

Published : Dec 21, 2020, 12:28 PM IST

ಲಂಡನ್:ರೋಹಾಂಪ್ಟನ್‌ನಲ್ಲಿ ನಡೆಯುತ್ತಿರುವ ಬ್ರಿಟ್ಸ್ ಪ್ರೀಮಿಯರ್ ಲೀಗ್ ಟೆನಿಸ್ ಪಂದ್ಯಾವಳಿಯಲ್ಲಿ ಮೂರು ಬಾರಿ ಗ್ರ್ಯಾಂಡ್ಸ್​ಸ್ಲಾಮ್ ಚಾಂಪಿಯನ್ ಆ್ಯಂಡಿ ಮರ್ರೆ ಡಾನ್ ಇವಾನ್ಸ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ, ಎರಡು ತಿಂಗಳಲ್ಲಿ ಮೊದಲ ಪಂದ್ಯವನ್ನು ಗೆದ್ದಿದ್ದಾರೆ.

ಅನಾರೋಗ್ಯದಿಂದ ಈ ಅಕ್ಟೋಬರ್‌ನಲ್ಲಿ ಜರ್ಮನಿಯ ಕಲೋನ್‌ನಲ್ಲಿ ನಡೆದ ಪಂದ್ಯಾವಳಿಯಿಂದ ಹಿಂದೆ ಸರಿದ ನಂತರ ಇಲ್ಲಿಯವರೆಗೂ ಕಣಕ್ಕಿಳಿದಿರಲಿಲ್ಲ. ಬ್ರಿಟ್ಸ್ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯದಲ್ಲಿ ಬ್ರಿಟಿಷ್ ನಂಬರ್ ಒನ್ ಆಟಗಾರ ಇವಾನ್ಸ್ ಅವರನ್ನು 7-6 (7-5), 6-4 ರಿಂದ ಸೋಲಿಸಿದರು.

ಕೋವಿಡ್ -19 ಲಾಕ್​ಡೌನ್ ಮತ್ತು ಗಾಯಗಳಿಂದಾಗಿ ಈ ವರ್ಷ ಕೇವಲ ಏಳು ಪಂದ್ಯಗಳನ್ನು ಆಡಿದ್ದ ಮರ್ರೆ, ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿದ್ದಾರೆ.

ನಾಲ್ಕು ದಿನಗಳ ಬ್ರಿಟ್ಸ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಯುಕೆ ಟೆನಿಸ್‌ನ ಆಡಳಿತ ಮಂಡಳಿಯಾದ ಲಾನ್ ಟೆನಿಸ್ ಅಸೋಸಿಯೇಷನ್ ​​ಆಯೋಜಿಸಿದೆ. ಇದು ಬ್ರಿಟಿಷ್ ಆಟಗಾರರಿಗೆ 2021ರ ಸೀಸನ್​ಗೆ ಸಜ್ಜಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ABOUT THE AUTHOR

...view details