ಪಾರ್ಮಾ(ಇಟಲಿ):ಅಮೆರಿಕದ ಉದಯೋನ್ಮುಖ ಟೆನಿಸ್ ಆಟಗಾರ್ತಿ ಕೊಕೊ ಗೌಫ್, ಚೀನಾದ ವಾಂಗ್ ಕ್ವಿಯಾಂಗ್ ಅವರನ್ನು ಮಣಿಸಿ ಎಮಿಲಾ-ರೊಮಿಗ್ನಾ ಓಪನ್ ಸಿಂಗಲ್ಸ್ ಓಪನ್ ಗೆದ್ದಿದ್ದಾರೆ.
ಶನಿವಾರ ಪಾರ್ಮಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 30ನೇ ಶ್ರೇಯಾಂಕದ ಗೌಫ್ 6-1, 6-3ರಲ್ಲಿ 48ನೇ ಶ್ರೇಯಾಂಕದ ಚೀನಾ ಆಟಗಾರ್ತಿಯ ವಿರುದ್ಧ ಪ್ರಾಬಲ್ಯಯುತ ಜಯ ಸಾಧಿಸಿ ವೃತ್ತಿ ಜೀವನದ 2ನೇ ಡಬ್ಲ್ಯೂಟಿಎ ಪ್ರಶಸ್ತಿ ಜಯಿಸಿದರು.
ಟೂರ್ನಿಯಲ್ಲಿ 17 ವರ್ಷದ ಯುವ ಆಟಗಾರ್ತಿ ಕೇವಲ ಒಂದೇ ಒಂದು ಸೆಟ್ನಲ್ಲಿ ಮಾತ್ರ ಸೋಲು ಕಂಡಿದ್ದರು. ಕಳೆದ ವಾರ ಅಂತ್ಯಗೊಂಡಿದ್ದ ಇಟಲಿಯನ್ ಓಪನ್ನಲ್ಲಿ ನಾಲ್ಕರ ಘಟ್ಟದಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದ್ದರು.