ನವದೆಹಲಿ: ಭಾರತ ಮತ್ತು ಪಾಕಿಸ್ತಾನಗಳ ನಡುವೆ ರಾಜಕೀಯ ಪರಿಸ್ಥಿತಿ ಹದಗೆಟ್ಟಿರುವ ಈ ಸಂದರ್ಭದಲ್ಲಿ ನಾವು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಎಐಟಿಎ ಅಂತರಾಷ್ಟ್ರೀಯ ಟೆನ್ನಿಸ್ ಫೆಡರೇಷನ್ಗೆ ಮನವಿ ಮಾಡಿಕೊಂಡಿದೆ.
370ನೇ ಯನ್ನು ಕಾಶ್ಮೀರದಲ್ಲಿ ರದ್ದು ಮಾಡಿದ ಮೇಲೆ ಪಾಕಿಸ್ತಾನ ಹಾಗೂ ಭಾರತದ ನಡುವೆ ರಾಜಕೀಯ ಸಂಬಂಧ ತೀರ ಹಳಸಿದೆ. ಹೀಗಿರುವಾಗಿ ಸುಮಾರು 55 ವರ್ಷಗಳ ನಂತರ ಡೇವಿಸ್ ಕಪ್ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಹೋಗಬೇಕಿದ್ದ ಭಾರತ ತಂಡ ಐಟಿಎಫ್ಗೆ ಟೂರ್ನಿಯನ್ನು ಸ್ಥಳಾಂತರಿಸಿ ಅಥವಾ ಪಾಕಿಸ್ತಾನದಲ್ಲಿ ನಡೆಯುವುದಾದರೆ ಟೂರ್ನಿಯನ್ನು ಮುಂದೂಡಿ ಎಂದು ಆಲ್ ಇಂಡಿಯಾ ಟೆನ್ನಿಸ್ ಫಡೆರೇಷನ್ ಮನವಿ ಮಾಡಿದೆ.