ಅಬುಧಾಬಿ:ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಶ್ವಶ್ರೇಷ್ಠ ನಾಯಕ ಎಂ.ಎಸ್. ಧೋನಿಯಿಂದ ತೆರವಾದ ನಾಯಕತ್ವ ಸ್ಥಾನಕ್ಕೆ ಬಂದ ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಆಟದಿಂದ ತಂಡವನ್ನು ಗೆಲುವಿನ ಟ್ರ್ಯಾಕ್ನಲ್ಲಿ ಕೊಂಡೊಯ್ಯುತ್ತಿದ್ದಾರೆ. ದುಬೈನಲ್ಲಿರುವ ಕೊಹ್ಲಿ ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
2017ರಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ಇಟಲಿಯಲ್ಲಿ ವಿವಾಹವಾಗಿದ್ದರು. ಈ ಇಬ್ಬರೂ ಸದ್ಯ ಸುಖ ದಾಂಪತ್ಯ ನಡೆಸುತ್ತಿದ್ದಾರೆ. 32ನೇ ಹುಟ್ಟುಹಬ್ಬವನ್ನು ದುಬೈನಲ್ಲಿ ಕೊಹ್ಲಿ ಆಚರಿಸಿಕೊಂಡಿದ್ದರು.
ಭಾರತ ಕ್ರಿಕೆಟ್ ತಂಡದ ನಾಯಕನಿಗೆ 33ನೇ ಹುಟ್ಟುಹಬ್ಬದ ಸಂಭ್ರಮ... U-19 ತಂಡದ ನಾಯಕನಾಗಿ ತಂಡವನ್ನು ಗೆಲ್ಲಿಸಿ ಕೊಟ್ಟಿದ್ದ ಕೊಹ್ಲಿ, ಅದೇ ಆಧಾರದಲ್ಲಿ ರಾಷ್ಟ್ರೀಯ ತಂಡದ ಕದ ತಟ್ಟಿದ್ದರು. 2008ರಲ್ಲಿ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟ ಕೊಹ್ಲಿ ಅಲ್ಲಿಂದ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಅಸಾಧ್ಯ ಎಂದೇ ಭಾವಿಸಿದ್ದ ಅದೆಷ್ಟೋ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 70 ಶತಕ, 118 ಅರ್ಧ ಶತಕ ಗಳಿಸಿರುವ ಕೊಹ್ಲಿಗೆ ಹಿರಿಯ ಆಟಗಾರರು, ಅಭಿಮಾನಿಗಳು ಶುಭ ಕೋರಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೊಹ್ಲಿ ಪಡೆ ಶುಕ್ರವಾರ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಹಣಾಹಣಿಯಲ್ಲಿ ರನ್ರೇಟ್ಗಳಿಂದ ಪಂದ್ಯ ಗೆದ್ದರೆ ವಿಶ್ವಕಪ್ ಟಿ20 ಸೆಮಿಫೈನಲ್ಗೆ ಲಗ್ಗೆಯಿಡುವ ಆಸೆ ಜೀವಂತವಾಗಿರುತ್ತೆ.