ಜೈಪುರ್:ಐಸಿಸಿ ಟಿ20 ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆ ಭಾರತ-ನ್ಯೂಜಿಲ್ಯಾಂಡ್ (IND vs NZ 2021) ತಂಡಗಳು ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲಿದ್ದು, ಈ ಕಾರಣದಿಂದಾಗಿ ಈಗಾಗಲೇ ಉಭಯ ತಂಡಗಳ ಕೆಲ ಪ್ಲೇಯರ್ಸ್ ಜೈಪುರ್ಗೆ ಬಂದಿಳಿದಿದ್ದಾರೆ.
ಜೈಪುರ್ದ ಸವಾಯಿ ಮಾನ್ಸಿಂಗ್ (SMS Stadium Jaipur) ಮೈದಾನದಲ್ಲಿ ನವೆಂಬರ್ 17ರಂದು ಮೊದಲ ಟಿ20 ಪಂದ್ಯ ನಡೆಯಲಿದೆ. ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ತಂಡ ಈಗಾಗಲೇ ಫೈನಲ್ ಪ್ರವೇಶ ಮಾಡಿದ್ದು, ತಂಡದಲ್ಲಿರುವ ಪ್ಲೇಯರ್ಸ್ ಹೊರತುಪಡಿಸಿ ಉಳಿದ ಎಲ್ಲ ಆಟಗಾರರು ಜೈಪುರ್ ತಲುಪಿದ್ದಾರೆ.
ಇದನ್ನೂ ಓದಿ:IND vs NZ: ಮೊದಲ ಟೆಸ್ಟ್ ಪಂದ್ಯದ ನಾಯಕತ್ವ ಜವಾಬ್ದಾರಿ ರಹಾನೆ ಹೆಗಲಿಗೆ
8 ವರ್ಷಗಳ ನಂತರ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಜೈಪುರ್ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಮೈದಾನ ನಡೆಯುತ್ತಿದ್ದು, ಕೇಂದ್ರ ಸರ್ಕಾರದಿಂದ ಅಭಿಮಾನಿಗಳು ಮೈದಾನಕ್ಕೆ ಆಗಮಿಸಿ ಪಂದ್ಯ ವೀಕ್ಷಣೆ ಮಾಡಲು ಅನುಮತಿ ಪಡೆದುಕೊಂಡ ಬಳಿಕ ನವೆಂಬರ್ 14ರಿಂದ ಟಿಕೆಟ್ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಟಿಕೆಟ್ ನೀಡಲು ಸವಾಯಿ ಮಾನ್ಸಿಂಗ್ ಕ್ರೀಡಾಂಗಣದ ಹೊರಗೆ ಕೌಂಟರ್ ಸ್ಥಾಪನೆ ಮಾಡಲು ನಿರ್ಧರಿಸಲಾಗಿದ್ದು, ಪಂದ್ಯ ವೀಕ್ಷಣೆ ಮಾಡಲು ಟಿಕೆಟ್ಗಳ ಬೆಲೆಯಲ್ಲಿ ಶೇ. 30ರಿಂದ 100ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ.
ಪ್ರಮುಖವಾಗಿ ಯಜುವೇಂದ್ರ ಚಹಾಲ್, ಋತುರಾಜ್ ಗಾಯಕ್ವಾಡ್ ಈಗಾಗಲೇ ಜೈಪುರ್ ತಲುಪಿದ್ದು, ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಇತರೆ ಆಟಗಾರರು ಶುಕ್ರವಾರ ಜೈಪುರಕ್ಕೆ ಬಂದಿಳಿದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮಹೇಂದ್ರ ಶರ್ಮಾ ಮಾಹಿತಿ ನೀಡಿದ್ದಾರೆ.