ಕರ್ನಾಟಕ

karnataka

ETV Bharat / sports

T20 World Cup: ಸ್ಕಾಟ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅಮೋಘ ಗೆಲುವು, ಸೆಮೀಸ್ ಆಸೆ ಜೀವಂತ

ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೆ.ಎಲ್​.ರಾಹುಲ್, ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದು, ಸೆಮೀಸ್ ಆಸೆ ಜೀವಂತವಾಗಿದೆ.

T20 World Cup: India thrash Scotland by eight wickets
T20 World Cup: ಸ್ಕಾಟ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅಮೋಘ ಗೆಲುವು, ಸೆಮೀಸ್ ಆಸೆ ಜೀವಂತ

By

Published : Nov 5, 2021, 10:23 PM IST

Updated : Nov 5, 2021, 10:31 PM IST

ದುಬೈ: ಟಿ20 ವಿಶ್ವಕಪ್​ನಲ್ಲಿ ಭಾರತ ಅಭೂತಪೂರ್ವ ದಾಖಲೆ ಬರೆದಿದೆ. ಸ್ಕಾಟ್ಲೆಂಡ್ ವಿರುದ್ದ ಎಂಟು ವಿಕೆಟ್‌ಗಳಿಂದ​ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಬೌಲರ್​ಗಳ ಮಾರಕದಾಳಿಗೆ ಸ್ಕಾಟ್ಲೆಂಡ್ ಬೆದರಿದೆ.

ಸ್ಕಾಟ್ಲೆಂಡ್ ನೀಡಿದ್ದ 85 ರನ್​ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, ಕೇವಲ 6.3 ಓವರ್​ಗಳಲ್ಲಿ 2 ವಿಕೆಟ್​​ ನಷ್ಟಕ್ಕೆ ಗುರಿ ತಲುಪಿತು. ಕೆ.ಎಲ್​.ರಾಹುಲ್ ಕೇವಲ 19 ಎಸೆತಕ್ಕೆ ಅರ್ಧಶತಕ ಗಳಿಸಿ ದಾಖಲೆ ಬರೆದರು.

ರೋಹಿತ್ ಶರ್ಮಾ ಕೂಡಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದು, 16 ಎಸೆತಕ್ಕೆ 30 ರನ್ ಗಳಿಸಿದ್ದಾರೆ. ಸೂರ್ಯ ಕುಮಾರ್ ಯಾದವ್ ಸಿಕ್ಸರ್‌ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಬೌಲಿಂಗ್ ವಿಭಾಗದಲ್ಲಿಯೂ ಟೀಂ ಇಂಡಿಯಾದ ಮಾರಕ ದಾಳಿಗೆ ಸ್ಕಾಟ್ಲೆಂಡ್ ತತ್ತರಿಸಿದೆ. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಪಡೆದರೆ, ಜಸ್ಪ್ರೀತ್ ಬೂಮ್ರಾ 2, ರವಿಚಂದ್ರನ್ ಆಶ್ವಿನ್ ಒಂದು ವಿಕೆಟ್ ಪಡೆದು ಮಿಂಚಿದರು.

17.4 ಓವರ್​ಗಳಲ್ಲಿ ಆಲೌಟಾಗಿ 85 ರನ್​ ಗಳಿಸಿದ್ದ ಸ್ಕಾಟ್ಲೆಂಡ್ ತಂಡದ ಪರ ಜಾರ್ಜ್ ಮುನ್ಸೆ 24, ಮೈಖಲ್ ಲೀಸ್ಕ್ 21, ಕ್ಯಾಲಂ ಮ್ಯಾಕ್​ಲಿಯೋಡ್ 16 ರನ್ ಗಳಿಸಿ, ತಂಡಕ್ಕೆ ಅಲ್ಪ ಮೊತ್ತದ ಕೊಡುಗೆ ನೀಡಿದರು. ಸ್ಕಾಟ್ಲೆಂಡ್ ಪರ ಬೌಲಿಂಗ್​ನಲ್ಲಿ ಮಾರ್ಕ್ ವ್ಯಾಟ್ ಮತ್ತು ಬ್ರಾಡ್ ವೀಲ್ ತಲಾ ಒಂದು ವಿಕೆಟ್ ಪಡೆದಿದ್ದರು.

Last Updated : Nov 5, 2021, 10:31 PM IST

ABOUT THE AUTHOR

...view details