ದುಬೈ:ಟಿ-20 ವಿಶ್ವಕಪ್ನ (T-20 world cup)ಫೈನಲ್ನಲ್ಲಿ ಆಡುವ ತಂಡಗಳು ಯಾವುವೆಂದು ನಿಗದಿಯಾಗಿದೆ. ನ್ಯೂಜಿಲ್ಯಾಂಡ್ (Newzealand)ಮತ್ತು ಆಸ್ಟ್ರೇಲಿಯಾ(Australia)ತಂಡಗಳು ಫೈನಲ್ ಪಂದ್ಯದಲ್ಲಿ(Final match)ಮುಖಾಮುಖಿಯಾಗಲಿವೆ.
ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಎರಡು ತಂಡಗಳ ನಡುವೆ ನಡೆದ ಕಾಳಗ 2019ರಲ್ಲಿ ನಡೆದ ಏಕದಿನ ವಿಶ್ಚಕಪ್ ಫೈನಲ್ ಪಂದ್ಯವನ್ನು ನೆನಪಿಸಿತು. ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್ ತಲುಪುವ ಮೂಲಕ ಕಿವೀಸ್ ತಂಡ ಐಸಿಸಿಯ ಎಲ್ಲ ಟೂರ್ನಿಗಳಲ್ಲಿ ಫೈನಲ್ ಪಂದ್ಯ ಆಡುತ್ತಿರುವ ಮೊದಲ ತಂಡವಾಗಿದೆ.
ಈ ಹಿಂದೆ ನ್ಯೂಜಿಲ್ಯಾಂಡ್ ತಂಡ 2019ರ ಏಕದಿನ ವಿಶ್ವಕಪ್ನಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರೆ, 2020ರಲ್ಲಿ ನಡೆದ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಭಾರತದ ವಿರುದ್ಧ ಜಯಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಇದೀಗ ಟಿ-20 ವಿಶ್ವಕಪ್ ಫೈನಲ್ಗೂ ಎಂಟ್ರಿ ಪಡೆದಿದ್ದು, ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದೆ.
ಇನ್ನೊಂದೆಡೆ ಎರಡನೇ ಸೆಮಿಫೈನಲ್ನಲ್ಲಿ ಪಾಕಿಸ್ತಾನ ತಂಡವನ್ನು ಸದೆಬಡಿದ ಆಸ್ಟ್ರೇಲಿಯಾ ಫೈನಲ್ ತಲುಪಿದೆ. ಇದೇ ಮೊದಲ ಬಾರಿಗೆ ಟಿ-20ಯಲ್ಲಿ ಫೈನಲ್ ತಲುಪಿರುವ ಆಸ್ಟ್ರೇಲಿಯಾ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯುವ ವಿಶ್ವಾಸವಿದೆ.
ಭಾನುವಾರ(ನ.14ರಂದು) ನಡೆಯುವ ಫೈನಲ್ ಪಂದ್ಯದಲ್ಲಿ ಯಾವ ತಂಡ ಗೆದ್ದು ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.