ದುಬೈ: ಐಸಿಸಿ ಟಿ20 (ICC T20 World Cup) ಮಹಾಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಚುಟುಕು ಕ್ರಿಕೆಟ್ ಜಗತ್ತಿನ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ(ICC) 12 ಕೋಟಿ ರೂ. ನಗದು ಬಹುಮಾನ ಸಿಕ್ಕಿದೆ.
ಐಸಿಸಿ ಟಿ20 ಫೈನಲ್ (T20 World Cup final) ಪಂದ್ಯದಲ್ಲಿ ಎದುರಾಳಿ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ತಂಡಕ್ಕೆ ಪ್ರಶಸ್ತಿ ಜೊತೆಗೆ 12 ಕೋಟಿ ರೂ. ನಗದು ಬಹುಮಾನ ಸಿಕ್ಕಿದ್ದು, ರನ್ನರ್ ಅಪ್ ತಂಡ ನ್ಯೂಜಿಲ್ಯಾಂಡ್ಗೆ 6 ಕೋಟಿ ರೂ. ನಗದು ನೀಡಲಾಗಿದೆ. ಉಳಿದಂತೆ ಸೆಮಿಫೈನಲ್ನಲ್ಲಿ ಸೋತು ಹೊರನಡೆದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಕ್ರಮವಾಗಿ 3 ಕೋಟಿ ರೂ. ಬಹುಮಾನ ಹಣ ಪಡೆದುಕೊಂಡಿವೆ.