ದುಬೈ :ಟಿ-20 ವಿಶ್ವಕಪ್ ಟೂರ್ನಿಯ ಸೂಪರ್ 12ಬಿ ಗುಂಪಿನ ಇಂದಿನ ಪಂದ್ಯದಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ಸೆಣೆಸಾಡಲಿವೆ. ಎರಡೂ ತಂಡಗಳಿಗೂ ನಿರ್ಣಾಯಕ ಪಂದ್ಯ ಇದಾಗಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಈ ನಡುವೆ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಮತ್ತು ಮೆಂಟರ್ ಧೋನಿ ಸಂಭಾಷಣೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಇದಕ್ಕೂ ಮೊದಲು ಧೋನಿ ಹಾಗೂ ಕೊಹ್ಲಿ ನಡುವೆ ಸುದೀರ್ಘ ಮಾತುಕತೆ ನಡೆದಿದೆ.
ತರಬೇತಿ ಸಮಯದ ಬಳಿಕ ಸೂರ್ಯಕುಮಾರ್ ಯಾದವ್ ಹಾಗೂ ಕೊಹ್ಲಿ ನಡುವೆ ದೀರ್ಘ ಮಾತುಕತೆ ನಡೆದಿದೆ. ಇದಾದ ಬಳಿಕ ಧೋನಿ ನಡುವೆಯೂ ಕೊಹ್ಲಿ ಸಂವಹನ ನಡೆಸಿದ್ದಾರೆ. ಟ್ರೈನಿಂಗ್ ಸೆಷನ್ ವೇಳೆ ಮೆಂಟರ್ ಧೋನಿ ಹಾಗೂ ಕೋಚ್ ರವಿಶಾಸ್ತ್ರಿ ತಂಡದ ಕುರಿತು ಚರ್ಚೆ ನಡೆಸಿದ್ದಾರೆ. ಬ್ಯಾಟ್ಸ್ಮನ್ಗಳ ಕುರಿತಂತೆ ಹಾಗೂ ಸ್ಕಿಲ್ಸ್ ಕುರಿತ ಮಾತುಕತೆ ನಡೆದಿದೆ ಎನ್ನಲಾಗಿದೆ.