ದುಬೈ:ಟಿ20 ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿ ಮಾಡಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಅತ್ಯಂತ ಕಡಿಮೆ ರನ್‌ಗಳಿಗೆ ಸ್ಲಾಟ್ಲೆಂಡ್ ಅನ್ನು ನಿಯಂತ್ರಿಸಿತು.
ಟಿ20 ವಿಶ್ವಕಪ್: ಶಮಿ, ಜಡೇಜಾಗೆ 3 ವಿಕೆಟ್: 85 ರನ್‌ಗಳಿಗೆ ಸ್ಕಾಟ್ಲೆಂಡ್ ಆಲೌಟ್ - Dubai international stadium
ಮೊದಲೆರಡು ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಟೀಂ ಇಂಡಿಯಾ, ಮೂರನೇ ಪಂದ್ಯದಲ್ಲಿ ಅಫ್ಘನ್ ವಿರುದ್ಧ 66 ರನ್ಗಳ ಭರ್ಜರಿ ಗೆಲುವು ಪಡೆದಿತ್ತು. ಇದೀಗ ಸ್ಕಾಟ್ಲೆಂಡ್ ಅನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದೆ.
T-20 world cup: ಬೌಲಿಂಗ್ಗೆ ಬೆದರಿದ ಸ್ಕಾಟ್ಲೆಂಡ್, ಶಮಿ ಹ್ಯಾಟ್ರಿಕ್, ಜಡೇಜಾಗೆ ಮೂರು ವಿಕೆಟ್
17.4 ಓವರ್ಗಳಲ್ಲಿ ಆಲೌಟಾಗಿ 85 ರನ್ ಗಳಿಸಿರುವ ಸ್ಕಾಟ್ಲೆಂಡ್ ತಂಡದ ಜಾರ್ಜ್ ಮುನ್ಸೆ 24, ಮೈಖಲ್ ಲೀಸ್ಕ್ 21, ಕ್ಯಾಲಂ ಮ್ಯಾಕ್ಲಿಯೋಡ್ 16 ರನ್ ಗಳಿಸಿ, ತಂಡಕ್ಕೆ ಅಲ್ಪ ಮೊತ್ತದ ಕೊಡುಗೆ ನೀಡಿದರು.
ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಪಡೆದರೆ, ಜಸ್ಪ್ರೀತ್ ಬೂಮ್ರಾ 2, ರವಿಚಂದ್ರನ್ ಆಶ್ವಿನ್ ಒಂದು ವಿಕೆಟ್ ಪಡೆದು ಮಿಂಚಿದರು.
Last Updated : Nov 5, 2021, 10:31 PM IST