ದುಬೈ: ಟಿ20 ವಿಶ್ವಕಪ್ನ ಸೂಪರ್ 12 ಬಿ ಗುಂಪಿನ 32ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಬಲಿಷ್ಠ ನ್ಯೂಜಿಲೆಂಡ್ ತಂಡ 172 ರನ್ ದಾಖಲಿಸಿತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸ್ಕಾಟ್ಲೆಂಡ್ ತಂಡ ನ್ಯೂಜಿಲೆಂಡ್ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ವಿಫಲವಾಯಿತು.
ಆರಂಭದಿಂದಲೇ ಅಪಾಯಕಾರಿ ಬ್ಯಾಟಿಂಗ್ಗೆ ಮುಂದಾದ ನ್ಯೂಜಿಲೆಂಡ್ ಪಡೆ ಪವರ್ ಪ್ಲೇನಲ್ಲಿ ಉತ್ತಮ ರನ್ ಕಲೆಹಾಕಿತು. ಆರಂಭಿಕ ಮಾರ್ಟಿನ್ ಗಪ್ಟಿಲ್ 56 ಎಸೆತದಲ್ಲಿ 7 ಸಿಕ್ಸರ್ 6 ಬೌಂಡರಿ ಸಿಡಿಸಿ ಬರೋಬ್ಬರಿ 93 ರನ್ ದಾಖಲಿಸಿದರು. ಇದಕ್ಕೂ ಮೊದಲು ಆರಂಭಿಕ ಡೇರಿಲ್ ಮಿಚೆಲ್ 13 ರನ್ಗಳಿಸಿ ಬಹುಬೇಗ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 20 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು ತಂಡ 172ರನ್ ಪೇರಿಸಿತು.