ಕರ್ನಾಟಕ

karnataka

ETV Bharat / sports

T20 World Cup: ತಂಡ ಫೈನಲ್​ಗೇರಿದ್ರೂ ಸಂಭ್ರಮಿಸದ ಗೆಲುವಿನ ರೂವಾರಿ ನಿಶಾಮ್, ಕಾರಣ ಏನು? - James Neesham

ಐಸಿಸಿ ಟಿ20 ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ನ್ಯೂಜಿಲ್ಯಾಂಡ್​ ಫೈನಲ್​ಗೆ ಲಗ್ಗೆ ಹಾಕಿದ್ದು, ಫೈನಲ್​​ ಕಾದಾಟಕ್ಕಾಗಿ ಸಜ್ಜುಗೊಳ್ಳುತ್ತಿದೆ.

Neesham
Neesham

By

Published : Nov 11, 2021, 4:49 PM IST

ದುಬೈ: ಐಸಿಸಿ ಟಿ20 ವಿಶ್ವಕಪ್​​ನ ಸೆಮಿಫೈನಲ್​​ನಲ್ಲಿ (ICC T20 SemiFinal Match) ಇಂಗ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ನ್ಯೂಜಿಲ್ಯಾಂಡ್ (England vs New Zealand) ಇದೇ ಮೊದಲ ಸಲ ಫೈನಲ್​ಗೆ ಲಗ್ಗೆ ಹಾಕಿದೆ.

ಈ ಪಂದ್ಯ ಮುಕ್ತಾಯದ ಬಳಿಕ ತಂಡದ ಬಹುತೇಕ ಎಲ್ಲ ಆಟಗಾರರು​ ಡಗೌಟ್​​ನಲ್ಲಿ ಕುಳಿತುಕೊಂಡು ಸಂಭ್ರಮಿಸುತ್ತಿದ್ದರು. ಆದರೆ ಬ್ಯಾಟರ್​ ಜೇಮ್ಸ್​ ನಿಶಾಮ್ ಮಾತ್ರ ಈ ಸಂಭ್ರಮದಲ್ಲಿ ಭಾಗಿಯಾಗಿರಲಿಲ್ಲ. ಇವರ ನಡೆ ಕ್ರಿಕೆಟ್​ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿತ್ತು.

ನಿನ್ನೆಯ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ 27 ರನ್​ಗಳಿಕೆ ಮಾಡಿ ಕೊನೆ ಕ್ಷಣದಲ್ಲಿ ಜೇಮ್ಸ್​ ನಿಶಾಮ್ (James Neesham)​ ವಿಕೆಟ್​ ಒಪ್ಪಿಸಿದ್ದರು. ಇದಾದ ಬಳಿಕ ಕಣಕ್ಕಿಳಿದಿದ್ದ ಮಿಚೆಲ್​​ ಸ್ಫೋಟಕ ಆಟವಾಡಿ ತಂಡವನ್ನು ಫೈನಲ್​ಗೆ ತೆಗೆದುಕೊಂಡು ಹೋಗಿದ್ದರು. ನ್ಯೂಜಿಲ್ಯಾಂಡ್​​ ಫೈನಲ್​ಗೆ ಲಗ್ಗೆ ಹಾಕುತ್ತಿದ್ದಂತೆ ಡಗೌಟ್​​ನಲ್ಲಿ ಕುಳಿತುಕೊಂಡಿದ್ದ ನ್ಯೂಜಿಲ್ಯಾಂಡ್​ನ ಎಲ್ಲ ಪ್ಲೇಯರ್ಸ್, ಸಿಬ್ಬಂದಿ ವರ್ಗ​​ ಸಂತೋಷದಿಂದ ಕುಣಿದಾಡುತ್ತಿದ್ದರು. ಆದರೆ ನಿಶಾಮ್​ ಮಾತ್ರ ಸುಮ್ಮನೆ ಕುಳಿತುಕೊಂಡಿದ್ದರು.

ಇದನ್ನೂ ಓದಿ:T20 World Cup: ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್​ ಪಂದ್ಯಕ್ಕೆ ರಿಜ್ವಾನ್​, ಶೋಯೆಬ್​ ಫಿಟ್​

ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರತಿಕ್ರಿಯೆ ನೀಡಿರುವ ನಿಶಾಮ್​, ಕರ್ತವ್ಯ ಮುಕ್ತಾಯಗೊಂಡಿತೇ? ನನಗೆ ಹಾಗೇ ಅನಿಸುತ್ತಿಲ್ಲ (Job finished? I don’t think so) ಎಂದು ಬರೆದುಕೊಂಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ​(ICC T20 World Cup)ನಲ್ಲಿ ಲೀಗ್ ಹಂತದಲ್ಲಿ ಪಾಕ್​ ವಿರುದ್ಧ ಸೋಲು ಕಂಡಿದ್ದ ನ್ಯೂಜಿಲ್ಯಾಂಡ್ ತಂಡ ತಂದನಂತರ ಭರ್ಜರಿಯಾಗಿ ಕಮ್​ಬ್ಯಾಕ್ ಮಾಡಿ, ಭಾರತ ಸೇರಿದಂತೆ ಅನೇಕ ತಂಡಗಳಿಗೆ ಸೋಲಿನ ರುಚಿ ತೋರಿಸಿ, ಇದೀಗ ಫೈನಲ್​ಗೆ ಬಂದು ನಿಂತಿದೆ.

ಇಂದು ನಡೆಯುವ ಮತ್ತೊಂದು ಸೆಮಿಫೈನಲ್​​ ಪಂದ್ಯದಲ್ಲಿ ಪಾಕಿಸ್ತಾನ-ಆಸ್ಟ್ರೇಲಿಯಾ ಖಾಮುಖಿಯಾಗುತ್ತಿದ್ದು, ಗೆಲುವು ಸಾಧಿಸುವ ತಂಡದೊಂದಿಗೆ ಕಿವೀಸ್​ ಎದುರು ಸೆಣಸಲಿದೆ.

ABOUT THE AUTHOR

...view details