ದುಬೈ :ಸೂಪರ್ 12 ಹಂತದ ಗ್ರೂಪ್ 2ರಲ್ಲಿ ಕ್ರಿಕೆಟ್ ಶಿಶುಗಳಾದ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ಮುಖಾಮುಖಿಯಾಗಲಿವೆ. ಈ ನಡುವೆ ಟಾಸ್ ಗೆದ್ದ ನಮೀಬಿಯಾ ತಂಡ ಬೌಲಿಂಗ್ ಆಯ್ದುಕೊಂಡಿದೆ.
ಸ್ಕಾಟ್ಲೆಂಡ್ ಈಗಾಗಲೇ ತಾನು ಆಡಿರುವ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನದ ವಿರುದ್ಧ ಸೋಲು ಕಂಡಿದ್ದರೆ, ನಮೀಬಿಯಾ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಇರಾದೆ ಹೊಂದಿದೆ. ಟಿ-20 ವಿಶ್ವಕಪ್ನಲ್ಲಿ ಉಭಯ ತಂಡಗಳು ಎರಡು ಸಲ ಮುಖಾಮುಖಿಯಾಗಿದ್ದು, ನಮೀಬಿಯಾ ಗೆಲುವಿನ ನಗೆ ಬೀರಿದೆ.
ಆಡುವ 11ರ ಬಳಗ
ಸ್ಕಾಟ್ಲೆಂಟ್ ತಂಡ:ಮ್ಯಾಥ್ಯೂ ಕ್ರಾಸ್ (ವಿ.ಕೀ), ಜಾರ್ಜ್ ಮುನ್ಸಿ, ರಿಚ್ಚಿ ಬೆರಿಂಗ್ಟನ್ (ನಾ), ಕ್ಯಾಲುಮ್ ಮಕ್ಲಾಡ್, ಮೈಕಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವ್, ಶಾಫಯಾನ್ ಶರೀಫ್, ಬ್ರಾಡ್ಲಿ ವೀಲ್, ಕ್ರಿಯಾಗ್ ವೆಲ್ಲೀಸ್.
ನಮೀಬಿಯಾ ತಂಡ: ಜೇನ್ ಗ್ರೀನ್ (ವಿ.ಕೀ), ಗೆರ್ಹಾರ್ಡ್ ಎರಾಸ್ಮಸ್ (ನಾ), ಕ್ರೇಗ್ ವಿಲಿಯಮ್ಸ್, ಮೈಕೆಲ್ ವ್ಯಾನ್ ಲಿಂಗೆನ್, ಡೇವಿಡ್ ವೈಸ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಪಿಕ್ಕಿ ಯಾ ಫ್ರಾನ್ಸ್, ಜಾನ್ ನಿಕೋಲ್ ಲೋಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್.