ದುಬೈ: ಐಸಿಸಿ ಟಿ20 ವಿಶ್ವಕಪ್ (T20 World Cup)ನ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ (AUS vs PAK) ತಂಡ ಮುಖಾಮುಖಿಯಾಗುತ್ತಿದ್ದು, ಭರ್ಜರಿ ಫಾರ್ಮ್ನಲ್ಲಿರುವ ಪಾಕ್ ತಂಡಕ್ಕೆ ಮತ್ತಷ್ಟು ಶುಭ ಸುದ್ದಿ ದೊರೆತಿದೆ.
ಪಾಕ್ ತಂಡದ ಇಬ್ಬರು ಪ್ರಮುಖ ಬ್ಯಾಟರ್ಗಳಾದ ಮೊಹಮ್ಮದ್ ರಿಜ್ವಾನ್ ಹಾಗೂ ಶೋಯೆಬ್ ಮಲಿಕ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತಗೊಂಡಿದ್ದು, ಪಂದ್ಯ ಆಡಲು ಫಿಟ್ ಆಗಿದ್ದಾರೆಂದು ವೈದ್ಯಕೀಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ (Pakistan Cricket Board) ಬೋರ್ಡ್ನಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಪಾಕ್ ತಂಡದ ಬ್ಯಾಟರ್ಗಳಾದ ಮೊಹಮ್ಮದ್ ರಿಜ್ವಾನ್ ಹಾಗೂ ಶೋಯೆಬ್ ಮಲಿಕ್ ಅವರಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಅಭ್ಯಾಸ ಸೆಷನ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇಬ್ಬರು ಪ್ರಮುಖ ಆಟಗಾರರು ಇಂದು ನಡೆಯುವ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು.