ದುಬೈ: ಐಸಿಸಿ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಸ್ಟೇಡಿಯಂನಲ್ಲಿರುವ ಎಲ್ಲಾ 25 ಸಾವಿರ ಆಸನಗಳನ್ನು ಭರ್ತಿಗೊಳಿಸಲು ನಿರ್ಧಾರ ಮಾಡಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನ ಸರ್ಕಾರಿ ಪ್ರಾಧಿಕಾರಗಳು ಅನುಮತಿ ನೀಡಿವೆ.
ಕ್ರೀಡಾಂಗಣದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತದೆ. ಈಗಲೂ ಐಸಿಸಿ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಿದೆ. ಫೈನಲ್ ಪಂದ್ಯವನ್ನು ಯಶಸ್ವಿಯಾಗಿ ನಡೆಸಿಕೊಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದ ಬಿಬಿಸಿಐ ಮೂಲಗಳು ಎಎನ್ಐಗೆ ಮಾಹಿತಿ ನೀಡಿವೆ.
ಟೀಂ ಇಂಡಿಯಾ ಸೆಮಿಫೈನಲ್ ತಲುಪಲು ವಿಫಲವಾದರೂ, ತಮ್ಮ ಅವಧಿಯಲ್ಲಿ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ವಿಶ್ವದ ಕ್ರಿಕೆಟ್ ತಂಡಗಳಲ್ಲಿ ಟೀಂ ಇಂಡಿಯಾ ಕೂಡಾ ಒಂದು ಎಂದು ಟೀಂ ಇಂಡಿಯಾದ ಕೋಚ್ ಆಗಿದ್ದ ರವಿಶಾಸ್ತ್ರಿ ಹೇಳಿದ್ದರು.
ಅಷ್ಟೇ ಅಲ್ಲದೇ ಏಳು ವರ್ಷಗಳಿಂದ ನಾನು ತಂಡದ ಭಾಗವಾಗಿದ್ದು, ನಾವು ಈ ವಿಶ್ವಕಪ್ ಅನ್ನು ಗೆಲ್ಲದೇ ಇರಬಹುದು, ಆದರೆ ಮುಂದಿನ ದಿನಗಳಲ್ಲಿ ನಾವು ಮತ್ತಷ್ಟು ಬಲಿಷ್ಟರಾಗುತ್ತೇವೆ ಎಂದು ರವಿಶಾಸ್ತ್ರಿ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗ ಸದ್ಯಕ್ಕೆ ನವೆಂಬರ್ 14ರಂದು ರಾತ್ರಿ 7.30ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ:ಟಿ20 ನಾಯಕನ ಪಟ್ಟಕ್ಕೆ ರೋಹಿತ್ ಶರ್ಮಾ ಸೂಕ್ತ ಅಭ್ಯರ್ಥಿ: ಗವಾಸ್ಕರ್