ಅಬುಧಾಬಿ:ಅಸಲಂಕಾ ಮತ್ತು ನಿಸ್ಸಾಂಕ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಶ್ರಿಲಂಕಾ ತಂಡ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 189 ರನ್ಗಳಿಸಿದ್ದು, ವಿಂಡೀಸ್ಗೆ 190 ರನ್ಗಳ ಗುರಿ ನೀಡಿತ್ತು. ಬೃಹತ್ ಮೊತ್ತವನ್ನು ಬೆನ್ನತ್ತುವ ಭರದಲ್ಲಿ ವಿಂಡೀಸ್ ತಂಡ ಎಡವಿದ್ದು, ರನ್ಗಳಿಂದ ಸೋಲು ಕಂಡಿತು. ಈ ಸೋಲಿನ ಮೂಲಕ ವಿಂಡೀಸ್ ತಂಡ ಟೂರ್ನಿಯಿಂದ ಹೊರ ನಡೆಯಿತು.
ಶ್ರೀಲಂಕಾ ಇನ್ನಿಂಗ್ಸ್: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರಿಲಂಕಾ ಮೊದಲ ವಿಕೆಟ್ಗೆ 42 ರನ್ಗಳ ಜೊತೆಯಾಟ ನೀಡಿತು. ಕುಸಾಲ್ ಪೆರೆರಾ 21 ಎಸೆತಗಳಲ್ಲಿ 29 ರನ್ಗಳಿಸಿ ಔಟಾದರು. ಪೆರೆರಾ ಔಟಾಗುತ್ತಿದ್ದಂತೆ ಕ್ರೀಸ್ಗೆ ಆಗಮಿಸಿದ ಅಸಲಂಕಾ 2ನೇ ವಿಕೆಟ್ಗೆ 91 ರನ್ಗಳ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ನಿಸ್ಸಾಂಕ 41 ಎಸೆತಗಳಲ್ಲಿ 5 ಬೌಂಡರಿ ಸಹಿತ 51 ರನ್ಗಳಿಸಿ ಡ್ವೇನ್ ಬ್ರಾವೋಗೆ ವಿಕೆಟ್ ಒಪ್ಪಿಸಿದರು. ಅಸಲಂಕಾ 41 ಎಸೆತಗಳಲ್ಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 68 ರನ್ಗಳಿಸಿ 19ನೇ ಓವರ್ನಲ್ಲಿ ರಸೆಲ್ ಬೌಲಿಂಗ್ನಲ್ಲಿ ಹೆಟ್ಮಾಯರ್ಗೆ ಕ್ಯಾಚ್ ನೀಡಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ನಾಯಕ ಶನಕ ಕೇವಲ 14 ಎಸೆತಗಳಲ್ಲಿ 25 ರನ್ಗಳಿಸಿ ಶ್ರೀಲಂಕಾ ತಂಡ ಬೃಹತ್ ಮೊತ್ತ ದಾಖಲಿಸುವುದಕ್ಕೆ ಪ್ರಮುಖ ಪಾತ್ರವಹಿಸಿದರು. ಒಟ್ನಲ್ಲಿ ಶ್ರೀಲಂಕಾ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು 189 ರನ್ಗಳನ್ನು ಗಳಿಸಿತು.
ವೆಸ್ಟ್ ಇಂಡೀಸ್ ಪರ ಆಂಡ್ರೆ ರಸೆಲ್ 4 ಓವರ್ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಬ್ರಾವೋ 42ಕ್ಕೆ1 ವಿಕೆಟ್ ಪಡೆದರೂ ದುಬಾರಿಯಾದರು. ರಾಂಪಾಲ್ 37, ಹೋಲ್ಡರ್ 37 ರನ್ ಬಿಟ್ಟುಕೊಟ್ಟರು.