ಶಾರ್ಜಾ: ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಅವರ ಸಿಡಿಲಬ್ಬರದ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 163 ರನ್ಗಳಿಸಿದ್ದು, ಶ್ರೀಲಂಕಾ ತಂಡಕ್ಕೆ ಗೆಲ್ಲಲು 164 ರನ್ಗಳ ಸ್ಪರ್ಧಾತ್ಮಕ ಮೊತ್ತ ಗುರಿ ನೀಡಿತ್ತು. ಆದ್ರೆ ಗೆಲುವಿನ ಆಸೆ ಕಂಡಿದ್ದ ಶ್ರೀಲಂಕಾ ಕೊನೆಯಲ್ಲಿ ಎಡವಿದ್ದು, ಹೀನಾಯ ಸೋಲು ಕಂಡಿತು.
ಇಂಗ್ಲೆಂಡ್ ಇನ್ನಿಂಗ್ಸ್:ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಕೇವಲ 35 ರನ್ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಯಿತು. ಆದರೆ ಬಟ್ಲರ್ 67 ಎಸೆತಗಳಲ್ಲಿ ತಲಾ 6 ಬೌಂಡರಿ ಮತ್ತು 6 ಸಿಕ್ಸರ್ಗಳ ನೆರವಿನಿಂದ ಅಜೇಯ 101 ರನ್ಗಳಿಸಿ 163 ರನ್ಗಳ ಸವಾಲಿನ ಮೊತ್ತ ದಾಖಲಿಸಲು ನೆರವಾದರು.
ಇವರಿಗೆ ಸಾಥ್ ನೀಡಿದ ನಾಯಕ ನಾಯಕ ಮಾರ್ಗನ್ 36 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 40 ರನ್ಗಳಿಸಿದರು. ಜೇಸನ್ ರಾಯ್ (9), ಡೇವಿಡ್ ಮಲನ್ (6) ಹಾಗೂ ಬೈರ್ಸ್ಟೋವ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.ಶ್ರೀಲಂಕಾ ಪರ ವನಿಂಡು ಹಸರಂಗ 21 ರನ್ ನೀಡಿ 3 ವಿಕೆಟ್ ಪಡೆದರು. ತೀಕ್ಷಾನ 4 ಓವರ್ಗಳಲ್ಲಿ ಕೇವಲ 13 ರನ್ ನೀಡಿ ಆಂಗ್ಲರ ರನ್ಗತಿಗೆ ಕಡಿವಾಣ ಹಾಕಿದರು. ಆದರೆ ವೇಗಿಗಳಾದ ಚಮೀರ (43ಕ್ಕೆ1), ಲಹಿರು ಕುಮಾರ (44) ದುಬಾರಿಯಾದರು.
ಶ್ರೀಲಂಕಾ ಇನ್ನಿಂಗ್ಸ್:ಇಂಗ್ಲೆಂಡ್ ನೀಡಿದ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ್ದ ಶ್ರೀಲಂಕಾಕ್ಕೆ ಆರಂಭಿಕ ಆಘಾತ ಎದುರಾಯಿತು. ನಿಸ್ಸಾಂಕ್ ಮೊದಲ ಓವರ್ನಲ್ಲೇ ರನ್ಔಟ್ಗೆ ಗುರಿಯಾದರು. ಶ್ರೀಲಂಕಾ ತಂಡ 24 ರನ್ಗಳಿಸಿದ್ದಾಗ ಚರಿತ್ ಅಸಲಂಕಾ 21 ರನ್ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.
ಬಳಿಕ ಬಂದ ಪೆರೆರಾ (7) ಮತ್ತು ಫರ್ನಾಂಡೋ (13) ಹೆಚ್ಚು ಹೊತ್ತು ಕ್ರಿಸ್ನಲ್ಲಿ ಉಳಿಯದೇ ಪೆವಿಲಿಯನ್ಗೆ ಮರಳಿದರು. ಶ್ರೀಲಂಕಾ ತಂಡ 57 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಬಂದ ರಾಜಪಕ್ಸಾ (26), ನಾಯಕ ದಸುನ್ ಸನಕ್ (26) ಮತ್ತು ಹಸರಂಗ್ (34) ಅವರ ಅದ್ದೂರಿ ಬ್ಯಾಟಿಂಗ್ ಪ್ರದರ್ಶನದಿಂದ ಗೆಲುವಿನ ಆಸೆ ಕಂಡಿತು. ಬಳಿಕ ಮೇಲಿಂದ ಮೇಲೆ ವಿಕೆಟ್ಗಳು ಉರುಳಿದ್ದರಿಂದ ಮತ್ತೆ ಶ್ರೀಲಂಕಾ ತಂಡ ತೀವ್ರ ಸಂಕಟಕ್ಕೆ ಸಿಲುಕಿ ಸೋಲು ಕಂಡಿತು.
ಇಂಗ್ಲೆಂಡ್ ತಂಡದ ಪರ ಮೋಯಿನ್ ಅಲಿ, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್ ತಲಾ ಎರಡು ವಿಕೆಟ್ಗಳನ್ನು ಪಡೆದು ಮಿಂಚಿದರು. ಕ್ರಿಸ್ ವೋಕ್ಸ್ ಮತ್ತು ಲೈಮ್ ಲಿವಿಂಗ್ಸ್ಟೋನ್ ತಲಾ ಒಂದೊಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಆಸರೆಯಾದರು. ಈ ಗೆಲುವಿನಿಂದ ಇಂಗ್ಲೆಂಡ್ ತಂಡ ಪಾಯಿಂಟ್ ಟೇಬಲ್ನಲ್ಲಿ 8 ಅಂಕಗಳನ್ನು ಪಡೆಯುವ ಮೂಲಕ ಸೆಮಿ ಫೈನಲ್ನ್ನು ಪ್ರವೇಶಿಸಿದೆ ಮೊದಲ ತಂಡವಾಗಿದೆ.