ದುಬೈ: ಐಸಿಸಿ ಪ್ರಕಟಿಸಿರುವ ನೂತನ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ 23ನೇ ಸ್ಥಾನಕ್ಕೇರಿದ್ದಾರೆ. ಬೌಲರ್ ಜಸ್ಪ್ರೀತ್ ಬುಮ್ರಾ 10 ಸ್ಥಾನ ಏರಿಕೆ ಕಂಡು 24ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಮೊದಲು ಪಟ್ಟಿಯಲ್ಲಿದ್ದ ಐದನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಹಾಗೂ 8ನೇ ಸ್ಥಾನದಲ್ಲಿ ಕೆ.ಎಲ್.ರಾಹುಲ್ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ವಿಶ್ವಕಪ್ನಲ್ಲಿ ಸಿಡಿಸಿದ ಎರಡು ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ನ ಡೇವಿನ್ ಮಲನ್ ಹಿಂದಿಕ್ಕಿ ಟಿ20 ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇದು ಬಾಬರ್ ವೃತ್ತಿ ಜೀವನದಲ್ಲಿ 6ನೇ ಬಾರಿ ಮೊದಲ ಸ್ಥಾನ ಅಲಂಕರಿಸಿದಂತಾಗಿದೆ. ಜೊತೆಗೆ, ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲೂ ಬಾಬರ್ ಮೊದಲ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ನ ಮಲನ್ಗಿಂತಲೂ 36 ಅಂಕ ಹೆಚ್ಚು ಪಡೆದು ಒಟ್ಟು 834 ಅಂಕಗಳ ಮೂಲಕ ಮೊದಲ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಜೋ ಬಟ್ಲರ್ ಮತ್ತು ಜೇಸನ್ ರಾಯ್ ಪಟ್ಟಿಯಲ್ಲಿ ಮೇಲ್ದರ್ಜೆಗೇರಿದ್ದಾರೆ. ಟಿ20ಯಲ್ಲಿ ಮೊದಲ ಶತಕ ಸಿಡಿಸಿದ ಜೋಸ್ ಬಟ್ಲರ್ 8 ಸ್ಥಾನ ಏರಿಕೆ ಕಂಡು 9ನೇ ಸ್ಥಾನ ಪಡೆದಿದ್ದಾರೆ.