ಕರ್ನಾಟಕ

karnataka

ETV Bharat / sports

2024ರ ಟಿ20 ವಿಶ್ವಕಪ್ ಅಮೆರಿಕದಲ್ಲಿ ಆಯೋಜನೆ ಸಾಧ್ಯತೆ : ವರದಿ - Indian Olympic Association

30 ವರ್ಷ ವಯಸ್ಸು ದಾಟಿದ ಮೇಲೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆರಂಭದಲ್ಲೇ ಡಯಾಬಿಟಿಸ್ ಪತ್ತೆ ಮಾಡಿದರೆ ಇದರಿಂದ ಮುಂದಿನ ದಿನಗಳಲ್ಲಿ ಆಗುವ ಇತರೆ ಅನಾರೋಗ್ಯ ಸಮಸ್ಯೆಗಳನ್ನ ತಡೆಯಬಹುದಾಗಿದೆ..

ICC may pick US to host 2024 T20 World Cup: Report
2024ರ ಟಿ20 ವಿಶ್ವಕಪ್ ಅಮೆರಿಕದಲ್ಲಿ ಆಯೋಜನೆ ಸಾಧ್ಯತೆ: ವರದಿ

By

Published : Nov 14, 2021, 8:20 PM IST

ಸಿಡ್ನಿ, ಆಸ್ಟ್ರೇಲಿಯಾ:2028ರ ಒಲಿಂಪಿಕ್ಸ್ (2028ನ Olympic) ಅನ್ನು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಬೆನ್ನಲ್ಲೇ 2024ರ ಕ್ರಿಕೆಟ್​ ಟಿ20 ವಿಶ್ವಕಪ್ (2024 T20 World Cup) ಅಮೆರಿಕದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಮಾಧ್ಯಮವೊಂದರ ವರದಿಯು ಹೇಳುವಂತೆ 2024ರ ಟಿ20 ವಿಶ್ವಕಪ್ ಅನ್ನು ಆಯೋಜಿಸಲು ಅಂತಾರರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Council-ICC) ಯುಎಸ್ಎ ಕ್ರಿಕೆಟ್ (USA Cricket) ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯೂಐ) ಮಂಡಳಿಗಳಿಗೆ ಜಂಟಿಯಾಗಿ ಬಿಡ್ ಅನ್ನು ನೀಡುವ ನಿರೀಕ್ಷೆಯಿದೆ.

2028ರಲ್ಲಿ ಲಾಸ್ ಏಂಜಲೀಸ್​ನಲ್ಲಿ ಒಲಿಂಪಿಕ್ ಆಯೋಜನೆಯಾಗಲಿದೆ. ಟಿ20 ವಿಶ್ವಕಪ್ ಆಯೋಜನೆಯಿಂದ ಒಲಿಂಪಿಕ್​ನಲ್ಲಿ ಕ್ರಿಕೆಟ್ ಆಟ ಸೇರ್ಪಡೆಯ ಸಾಧ್ಯತೆಯೂ ದಟ್ಟವಾಗಿರಲಿದೆ ಎಂದು ಕೆಲವು ವರದಿಗಳು ಉಲ್ಲೇಖಿಸಿವೆ.

ಭಾರತದ ಒಲಿಂಪಿಕ್ ಅಸೋಸಿಯೇಷನ್ ​​(Indian Olympic Association) ಕೂಡ 2036ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಬಿಡ್ ಮಾಡಲು ಪ್ರಯತ್ನಿಸುವುದಾಗಿ ಹೇಳಿಕೊಂಡಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸಿದರೆ, ಮುಂದಿನ ದಿನಗಳಲ್ಲಿ ಕ್ರಿಕೆಟ್ ಅತ್ಯಂತ ದೊಡ್ಡ ಕ್ರೀಡಾಕೂಟವಾಗಿ ಹೊರ ಹೊಮ್ಮಲಿದೆ.

ಇದನ್ನೂ ಓದಿ:ಎನ್​ಸಿಎ ಮುಖ್ಯಸ್ಥ ಹುದ್ದೆ ಅಲಂಕರಿಸಲಿದ್ದಾರೆ ವಿವಿಎಸ್​ ಲಕ್ಷ್ಮಣ್

ABOUT THE AUTHOR

...view details